Skip to content
النِّسَاء /

ಆಯತ್ 46

4 : 46

ಆಯತ್ 46 of النِّسَاء (4 : 46). This page carries the verse in the Uthmani script with a translation of its meaning, at a stable URL that can be cited on its own.

النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 46

مِّنَ ٱلَّذِينَ هَادُواْ يُحَرِّفُونَ ٱلۡكَلِمَ عَن مَّوَاضِعِهِۦ وَيَقُولُونَ سَمِعۡنَا وَعَصَيۡنَا وَٱسۡمَعۡ غَيۡرَ مُسۡمَعٖ وَرَٰعِنَا لَيَّۢا بِأَلۡسِنَتِهِمۡ وَطَعۡنٗا فِي ٱلدِّينِۚ وَلَوۡ أَنَّهُمۡ قَالُواْ سَمِعۡنَا وَأَطَعۡنَا وَٱسۡمَعۡ وَٱنظُرۡنَا لَكَانَ خَيۡرٗا لَّهُمۡ وَأَقۡوَمَ وَلَٰكِن لَّعَنَهُمُ ٱللَّهُ بِكُفۡرِهِمۡ فَلَا يُؤۡمِنُونَ إِلَّا قَلِيلٗا

ಯಹೂದಿಗಳಲ್ಲಿ ಕೆಲವರಿದ್ದಾರೆ. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ. ಅವರು ಹೇಳುತ್ತಾರೆ: “ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ.” “ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ.” “ನಮ್ಮ ಕಡೆಗೆ ಗಮನಕೊಡು.” (ಹೀಗೆ ಹೇಳುವಾಗ) ಅವರು ತಮ್ಮ ನಾಲಗೆಗಳನ್ನು ತಿರುಚುತ್ತಾರೆ ಮತ್ತು ಧರ್ಮಕ್ಕೆ ಕಳಂಕ ಹಚ್ಚುತ್ತಾರೆ. ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ; ಕೇಳಿರಿ; ಮತ್ತು ನಮ್ಮನ್ನು ನೋಡಿರಿ ಎಂದು ಅವರು ಹೇಳುತ್ತಿದ್ದರೆ ಅವರಿಗೆ ಅದು ಅತ್ಯುತ್ತಮ ಮತ್ತು ನೇರವಾಗಿರುತ್ತಿತ್ತು. ಆದರೆ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.

Explanation & meanings · 1
  1. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನಾದರೂ ಆದೇಶಿಸಿದರೆ ಸತ್ಯವಿಶ್ವಾಸಿಗಳು ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ ಎನ್ನುತ್ತಿದ್ದರು. ಆದರೆ ಯಹೂದಿಗಳು ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ ಎನ್ನುತ್ತಾ ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಿದ್ದರು. ಅದೇ ರೀತಿ ಅವರು ದ್ವಂದ್ವಾರ್ಥವಿರುವ ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ ಎಂಬ ಮಾತನ್ನೂ ಹೇಳುತ್ತಿದ್ದರು. ಇದಕ್ಕೆ ಹೊರತಾಗಿ ಅವರು ನಮ್ಮ ಕಡೆಗೆ ಗಮನಕೊಡು (ರಾಇನಾ) ಎಂಬ ದ್ವಂದ್ವಾರ್ಥವಿರುವ ಇನ್ನೊಂದು ವಚನವನ್ನು ಬಳಸುತ್ತಿದ್ದರು. ಇವುಗಳನ್ನು ಹೇಳುವಾಗ ಅವರು ತಮ್ಮ ನಾಲಗೆಗಳನ್ನು ತಿರುಚಿ ಎರಡು ರೀತಿಯ ಅರ್ಥ ಬರುವಂತೆ ಮಾಡುತ್ತಿದ್ದರು.