وَقَوۡلِهِمۡ إِنَّا قَتَلۡنَا ٱلۡمَسِيحَ عِيسَى ٱبۡنَ مَرۡيَمَ رَسُولَ ٱللَّهِ وَمَا قَتَلُوهُ وَمَا صَلَبُوهُ وَلَٰكِن شُبِّهَ لَهُمۡۚ وَإِنَّ ٱلَّذِينَ ٱخۡتَلَفُواْ فِيهِ لَفِي شَكّٖ مِّنۡهُۚ مَا لَهُم بِهِۦ مِنۡ عِلۡمٍ إِلَّا ٱتِّبَاعَ ٱلظَّنِّۚ وَمَا قَتَلُوهُ يَقِينَۢا
“ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಮಸೀಹ ಈಸಾರನ್ನು ನಾವು ಕೊಂದಿದ್ದೇವೆ” ಎಂದು ಹೇಳಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು). ಅವರು ಅವರನ್ನು ಕೊಲ್ಲಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ವಾಸ್ತವವಾಗಿ, ಅವರಿಗೆ ಅದನ್ನು ಸಾದೃಶ್ಯಗೊಳಿಸಲಾಯಿತು. ನಿಶ್ಚಯವಾಗಿಯೂ ಅವರ (ಈಸಾರ) ವಿಷಯದಲ್ಲಿ ಭಿನ್ನಮತ ತಳೆದವರು ಅದರ ಬಗ್ಗೆ ಸಂಶಯದಲ್ಲಿದ್ದಾರೆ. ವದಂತಿಗಳನ್ನು ಹಿಂಬಾಲಿಸುವುದನ್ನು ಬಿಟ್ಟರೆ ಅವರಿಗೆ ಅದರ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ. ನಿಶ್ಚಯವಾಗಿಯೂ ಅವರು ಈಸಾರನ್ನು ಕೊಲ್ಲಲಿಲ್ಲ.
- ಯಹೂದಿಗಳು ಈಸಾ (ಯೇಸು) (ಅವರ ಮೇಲೆ ಶಾಂತಿಯಿರಲಿ) ರನ್ನು ಕೊಂದಿಲ್ಲ. ಶಿಲುಬೆಗೇರಿಸಿಯೂ ಇಲ್ಲ. ಬದಲಿಗೆ ಈಸಾ (ಅವರ ಮೇಲೆ ಶಾಂತಿಯಿರಲಿ) ರಂತೆಯೇ ಇದ್ದ ಒಬ್ಬ ವ್ಯಕ್ತಿಯನ್ನು ಅವರು ಈಸಾ ಎಂದು ಭಾವಿಸಿ ಶಿಲುಬೆಗೇರಿಸಿದರು.