Skip to content
ಸೂರಗಳ ಪಟ್ಟಿ /

فَاطِر

فَاطِر is chapter 35 of the Quran and has 45 verses. This page presents it in full in the Uthmani script, with a verse-by-verse translation of its meaning.

45 ಆಯತ್‌ಗಳು ಸೂರ ಸಂಖ್ಯೆ 35
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

ٱلۡحَمۡدُ لِلَّهِ فَاطِرِ ٱلسَّمَٰوَٰتِ وَٱلۡأَرۡضِ جَاعِلِ ٱلۡمَلَٰٓئِكَةِ رُسُلًا أُوْلِيٓ أَجۡنِحَةٖ مَّثۡنَىٰ وَثُلَٰثَ وَرُبَٰعَۚ يَزِيدُ فِي ٱلۡخَلۡقِ مَا يَشَآءُۚ إِنَّ ٱللَّهَ عَلَىٰ كُلِّ شَيۡءٖ قَدِيرٞ

ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ದೇವದೂತರು‍ಗಳನ್ನು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ ದೂತರಾಗಿ ಕಳುಹಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ಸೃಷ್ಟಿಯಲ್ಲಿ ಅವನು ಇಚ್ಛಿಸುವುದನ್ನು ಹೆಚ್ಚಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

مَّا يَفۡتَحِ ٱللَّهُ لِلنَّاسِ مِن رَّحۡمَةٖ فَلَا مُمۡسِكَ لَهَاۖ وَمَا يُمۡسِكۡ فَلَا مُرۡسِلَ لَهُۥ مِنۢ بَعۡدِهِۦۚ وَهُوَ ٱلۡعَزِيزُ ٱلۡحَكِيمُ

ಅಲ್ಲಾಹು ಜನರಿಗೆ ಯಾವುದೇ ದಯೆಯನ್ನು ತೆರೆದುಕೊಟ್ಟರೆ ಅದಕ್ಕೆ ತಡೆಯೊಡ್ಡಲು ಯಾರಿಗೂ ಸಾಧ್ಯವಿಲ್ಲ. ಅವನು ಏನಾದರೂ ತಡೆಹಿಡಿದರೆ ಅವನ ನಂತರ ಅದನ್ನು ಬಿಡಿಸಿಕೊಡುವವರು ಯಾರೂ ಇಲ್ಲ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

يَٰٓأَيُّهَا ٱلنَّاسُ ٱذۡكُرُواْ نِعۡمَتَ ٱللَّهِ عَلَيۡكُمۡۚ هَلۡ مِنۡ خَٰلِقٍ غَيۡرُ ٱللَّهِ يَرۡزُقُكُم مِّنَ ٱلسَّمَآءِ وَٱلۡأَرۡضِۚ لَآ إِلَٰهَ إِلَّا هُوَۖ فَأَنَّىٰ تُؤۡفَكُونَ

ಓ ಜನರೇ! ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನನ್ನು ಬಿಟ್ಟು ಆಕಾಶ ಮತ್ತು ಭೂಮಿಯಿಂದ ನಿಮಗೆ ಉಪಜೀವನವನ್ನು ಒದಗಿಸುವ ಬೇರೆ ಸೃಷ್ಟಿಕರ್ತರಿದ್ದಾರೆಯೇ? ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದರೂ ನಿಮ್ಮನ್ನು ಹೇಗೆ ತಪ್ಪಿಸಿಬಿಡಲಾಗುತ್ತಿದೆ?

وَإِن يُكَذِّبُوكَ فَقَدۡ كُذِّبَتۡ رُسُلٞ مِّن قَبۡلِكَۚ وَإِلَى ٱللَّهِ تُرۡجَعُ ٱلۡأُمُورُ

ಅವರು ನಿಮ್ಮನ್ನು ನಿಷೇಧಿಸಿದರೆ—ನಿಮಗಿಂತ ಮೊದಲೂ ಅನೇಕ ಸಂದೇಶವಾಹಕರುಗಳು ನಿಷೇಧಕ್ಕೊಳಗಾಗಿದ್ದಾರೆ. ಎಲ್ಲಾ ವಿಷಯಗಳನ್ನೂ ಅಲ್ಲಾಹನ ಕಡೆಗೇ ಮರಳಿಸಲಾಗುತ್ತದೆ.

يَٰٓأَيُّهَا ٱلنَّاسُ إِنَّ وَعۡدَ ٱللَّهِ حَقّٞۖ فَلَا تَغُرَّنَّكُمُ ٱلۡحَيَوٰةُ ٱلدُّنۡيَا وَلَا يَغُرَّنَّكُم بِٱللَّهِ ٱلۡغَرُورُ

ಓ ಮನುಷ್ಯರೇ! ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದ್ದರಿಂದ ಇಹಲೋಕ ಜೀವನವು ನಿಮ್ಮನ್ನು ಮರುಳುಗೊಳಿಸದಿರಲಿ. ನಯವಂಚಕನಾದ ಶೈತಾನನು ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ಮರುಳುಗೊಳಿಸದಿರಲಿ.