Skip to content
آل عِمران /

ಆಯತ್ 81

3 : 81

ಆಯತ್ 81 of آل عِمران (3 : 81). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 81

وَإِذۡ أَخَذَ ٱللَّهُ مِيثَٰقَ ٱلنَّبِيِّـۧنَ لَمَآ ءَاتَيۡتُكُم مِّن كِتَٰبٖ وَحِكۡمَةٖ ثُمَّ جَآءَكُمۡ رَسُولٞ مُّصَدِّقٞ لِّمَا مَعَكُمۡ لَتُؤۡمِنُنَّ بِهِۦ وَلَتَنصُرُنَّهُۥۚ قَالَ ءَأَقۡرَرۡتُمۡ وَأَخَذۡتُمۡ عَلَىٰ ذَٰلِكُمۡ إِصۡرِيۖ قَالُوٓاْ أَقۡرَرۡنَاۚ قَالَ فَٱشۡهَدُواْ وَأَنَا۠ مَعَكُم مِّنَ ٱلشَّٰهِدِينَ

ಅಲ್ಲಾಹು ಪ್ರವಾದಿಗಳಿಂದ ಕರಾರನ್ನು ಪಡೆದ ಸಂದರ್ಭ: “ನಾನು ನಿಮಗೆ ಗ್ರಂಥ ಮತ್ತು ವಿವೇಕವನ್ನು ನೀಡಿ, ನಂತರ ನಿಮ್ಮ ಬಳಿಯಿರುವುದನ್ನು ದೃಢೀಕರಿಸುವ ಒಬ್ಬ ಸಂದೇಶವಾಹಕರು ನಿಮ್ಮ ಬಳಿಗೆ ಬಂದರೆ, ನೀವು ಅವರಲ್ಲಿ ವಿಶ್ವಾಸವಿಡಲೇಬೇಕು ಮತ್ತು ಅವರಿಗೆ ಸಹಾಯ ಮಾಡಲೇಬೇಕು.” ಅಲ್ಲಾಹು ಕೇಳಿದನು: “ಇದನ್ನು ಒಪ್ಪಿಕೊಂಡು ಈ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ನಿಭಾಯಿಸುವಿರಾ?” ಅವರು ಉತ್ತರಿಸಿದರು: “ನಾವು ಒಪ್ಪಿಕೊಂಡಿದ್ದೇವೆ.” ಅಲ್ಲಾಹು ಹೇಳಿದನು: “ಹಾಗಾದರೆ ನೀವು ಅದಕ್ಕೆ ಸಾಕ್ಷಿಗಳಾಗಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿಯಾಗಿರುವೆನು.”

Explanation & meanings · 1
  1. ಅಲ್ಲಾಹು ಪ್ರತಿಯೊಬ್ಬ ಪ್ರವಾದಿಯಿಂದಲೂ ಈ ಕರಾರನ್ನು ಪಡೆದಿದ್ದನು. ಈ ಕರಾರಿನ ಪ್ರಕಾರ ಒಬ್ಬ ಪ್ರವಾದಿ ಅಸ್ತಿತ್ವದಲ್ಲಿರುವಾಗ, ಅಥವಾ ಅವರ ಬೋಧನೆಯು ಅಸ್ತಿತ್ವದಲ್ಲಿರುವಾಗ, ಹೊಸ ಪ್ರವಾದಿಯ ಆಗಮನವಾದರೆ ಆ ಪ್ರವಾದಿ ತನ್ನ ಬೋಧನೆಯನ್ನು ನಿಲ್ಲಿಸಿ ಆ ಹೊಸ ಪ್ರವಾದಿಯನ್ನು ಅನುಸರಿಸಬೇಕು. ಒಬ್ಬ ಪ್ರವಾದಿಗೆ ತನ್ನ ನಂತರ ಬರುವ ಹೊಸ ಪ್ರವಾದಿಯನ್ನು ಅನುಸರಿಸುವುದು ಕಡ್ಡಾಯವಾದರೆ ಅವರ ಅನುಯಾಯಿಗಳಿಗೂ ಅದು ಕಡ್ಡಾಯವಾಗಿದೆಯೆಂದು ಬೇರೆಯೇ ಹೇಳಬೇಕಾಗಿಲ್ಲ. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಆಗಮನದ ನಂತರ ಹಿಂದಿನ ಪ್ರವಾದಿಗಳ ಬೋಧನೆಗಳೆಲ್ಲವೂ ಅನೂರ್ಜಿತವಾಗುತ್ತವೆ ಮತ್ತು ಆ ಎಲ್ಲಾ ಪ್ರವಾದಿಗಳು ಮತ್ತು ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಬೋಧನೆಗಳನ್ನು ಅನುಸರಿಸಬೇಕಾಗುತ್ತದೆ.