Skip to content
آل عِمران /

ಆಯತ್ 28

3 : 28

ಆಯತ್ 28 of آل عِمران (3 : 28). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 28

لَّا يَتَّخِذِ ٱلۡمُؤۡمِنُونَ ٱلۡكَٰفِرِينَ أَوۡلِيَآءَ مِن دُونِ ٱلۡمُؤۡمِنِينَۖ وَمَن يَفۡعَلۡ ذَٰلِكَ فَلَيۡسَ مِنَ ٱللَّهِ فِي شَيۡءٍ إِلَّآ أَن تَتَّقُواْ مِنۡهُمۡ تُقَىٰةٗۗ وَيُحَذِّرُكُمُ ٱللَّهُ نَفۡسَهُۥۗ وَإِلَى ٱللَّهِ ٱلۡمَصِيرُ

ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬಾರದು. ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನಿಂದ ಯಾವುದೇ ರಕ್ಷಣೆಯಿಲ್ಲ. ಆದರೆ ಅವರ ಕೆಡುಕಿನಿಂದ ಪಾರಾಗುವ ಉದ್ದೇಶವಿದ್ದರೆ ಹೊರತು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. (ಎಲ್ಲರೂ) ಅಲ್ಲಾಹನ ಬಳಿಗೇ ಮರಳಬೇಕಾಗಿದೆ.

Explanation & meanings · 2
  1. ಇಲ್ಲಿ ಸತ್ಯನಿಷೇಧಿಗಳು ಎಂದರೆ ಸತ್ಯವಿಶ್ವಾಸಿಗಳೊಂದಿಗೆ ವೈರ ಮತ್ತು ದ್ವೇಷ ಕಟ್ಟಿಕೊಂಡಿರುವ ಸತ್ಯನಿಷೇಧಿಗಳು. ಆದರೆ ಸತ್ಯವಿಶ್ವಾಸಿಗಳೊಂದಿಗೆ ವೈರತ್ವವಿಲ್ಲದ, ದ್ವೇಷವನ್ನು ಹೊಂದಿಲ್ಲದ ಸತ್ಯನಿಷೇಧಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದರಲ್ಲಿ ತೊಂದರೆಯಿಲ್ಲ.
  2. ಅಂದರೆ ಸತ್ಯನಿಷೇಧಿಗಳೊಡನೆ ಸ್ನೇಹ ಮಾಡಿಕೊಳ್ಳದ ಹೊರತು ಅವರ ಹಿಂಸೆಯಿಂದ ಪಾರಾಗಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಬಾಹ್ಯವಾಗಿ ಅವರೊಡನೆ ಸ್ನೇಹ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ಮುಸ್ಲಿಮೇತರ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಸಂಬಂಧಿಸಿದ್ದಾಗಿದೆ.