Skip to content
آل عِمران /

ಆಯತ್ 181

3 : 181

ಆಯತ್ 181 of آل عِمران (3 : 181). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 181

لَّقَدۡ سَمِعَ ٱللَّهُ قَوۡلَ ٱلَّذِينَ قَالُوٓاْ إِنَّ ٱللَّهَ فَقِيرٞ وَنَحۡنُ أَغۡنِيَآءُۘ سَنَكۡتُبُ مَا قَالُواْ وَقَتۡلَهُمُ ٱلۡأَنۢبِيَآءَ بِغَيۡرِ حَقّٖ وَنَقُولُ ذُوقُواْ عَذَابَ ٱلۡحَرِيقِ

ಅಲ್ಲಾಹು ಬಡವನು ಮತ್ತು ನಾವು ಶ್ರೀಮಂತರು ಎಂದು ಹೇಳಿದವರ (ಯಹೂದಿಗಳ) ಮಾತನ್ನು ಅಲ್ಲಾಹು ಖಂಡಿತ ಕೇಳಿದ್ದಾನೆ. ಅವರು ಹೇಳಿದ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದನ್ನು ನಾವು ದಾಖಲಿಸಿಡುತ್ತೇವೆ. ಉರಿಯುವ ನರಕ ಶಿಕ್ಷೆಯ ರುಚಿಯನ್ನು ನೋಡಿರಿ ಎಂದು ನಾವು ಅವರೊಡನೆ ಹೇಳುವೆವು.

Explanation & meanings · 1
  1. ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಾ, “ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವರು ಯಾರು?” ಎಂಬ ವಚನವು ಅವತೀರ್ಣವಾದಾಗ ಯಹೂದಿಗಳು “ಓ ಮುಹಮ್ಮದ್! ನಿಮ್ಮ ದೇವರು ಬಡವನಾಗಿ ಬಿಟ್ಟಿದ್ದಾನೆ. ಅವನು ಅವನ ಸೃಷ್ಟಿಗಳಿಂದ ಹಣ ಕೇಳುತ್ತಿದ್ದಾನೆ.” ಎಂದು ತಮಾಷೆ ಮಾಡತೊಡಗಿದರು. ಆಗ ಈ ವಚನವು ಅವತೀರ್ಣವಾಯಿತು.