Skip to content
آل عِمران /

ಆಯತ್ 128

3 : 128

ಆಯತ್ 128 of آل عِمران (3 : 128). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 128

لَيۡسَ لَكَ مِنَ ٱلۡأَمۡرِ شَيۡءٌ أَوۡ يَتُوبَ عَلَيۡهِمۡ أَوۡ يُعَذِّبَهُمۡ فَإِنَّهُمۡ ظَٰلِمُونَ

(ಓ ಪ್ರವಾದಿಯವರೇ!) ತೀರ್ಮಾನದಲ್ಲಿ ನಿಮಗೆ ಯಾವುದೇ ಅಧಿಕಾರವಿಲ್ಲ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ, ನಿಶ್ಚಯವಾಗಿಯೂ ಅವರು ಅಕ್ರಮಿಗಳಾಗಿದ್ದಾರೆ.

Explanation & meanings · 1
  1. ಉಹುದ್ ಯುದ್ಧದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದಿನ ಹಲ್ಲು ತುಂಡಾಗಿ ಮುಖಕ್ಕೆ ಗಾಯವಾದಾಗ ಅವರು ಬೇಸರದಿಂದ ಹೇಳಿದರು: “ತಮ್ಮ ಪ್ರವಾದಿಯನ್ನು ಗಾಯಗೊಳಿಸಿದ ಜನರು ಯಶಸ್ವಿಯಾಗುವುದಾದರೂ ಹೇಗೆ?” ಆಗ ಅಲ್ಲಾಹು ಅವರ ಮಾತನ್ನು ತಿದ್ದುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು. ಅಂದರೆ ಯಾರಿಗೆ ಸನ್ಮಾರ್ಗ ತೋರಿಸಬೇಕು ಯಾರಿಗೆ ತೋರಿಸಬಾರದು? ಯಾರನ್ನು ಶಿಕ್ಷೆ ನೀಡಬೇಕು ಮತ್ತು ಯಾರಿಗೆ ಕ್ಷಮೆ ನೀಡಬೇಕು? ಎಂಬುದನ್ನು ಅಲ್ಲಾಹು ತೀರ್ಮಾನಿಸುತ್ತಾನೆ. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ತೀರ್ಮಾನಿಸುವ ಯಾವುದೇ ಹಕ್ಕಿಲ್ಲ.