24 : 11
إِنَّ ٱلَّذِينَ جَآءُو بِٱلۡإِفۡكِ عُصۡبَةٞ مِّنكُمۡۚ لَا تَحۡسَبُوهُ شَرّٗا لَّكُمۖ بَلۡ هُوَ خَيۡرٞ لَّكُمۡۚ لِكُلِّ ٱمۡرِيٕٖ مِّنۡهُم مَّا ٱكۡتَسَبَ مِنَ ٱلۡإِثۡمِۚ وَٱلَّذِي تَوَلَّىٰ كِبۡرَهُۥ مِنۡهُمۡ لَهُۥ عَذَابٌ عَظِيمٞ
ನಿಶ್ಚಯವಾಗಿಯೂ ಆ ಸುಳ್ಳು ಸುದ್ದಿಯನ್ನು ತಂದವರು ನಿಮ್ಮಲ್ಲೇ ಇರುವ ಒಂದು ಗುಂಪಿನವರಾಗಿದ್ದಾರೆ. ಅದು ನಿಮಗೆ ಕೆಡುಕೆಂದು ಭಾವಿಸಬೇಡಿ. ಬದಲಿಗೆ, ಅದು ನಿಮಗೆ ಒಳಿತಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಮಾಡಿದ ಪಾಪಕ್ಕೆ ತಕ್ಕಂತೆ ಶಿಕ್ಷೆಯಿದೆ. ಅವರಲ್ಲಿ ಹಿರಿಯ ಪಾತ್ರ ವಹಿಸಿದವನಾರೋ ಅವನಿಗೆ ಘೋರ ಶಿಕ್ಷೆಯಿದೆ.
Explanation & meanings · 1
- ಇಲ್ಲಿ ಹೇಳಿರುವುದು ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಆಯಿಶರ ಮೇಲೆ ವ್ಯಭಿಚಾರ ಆರೋಪ ಹೊರಿಸಿದವರ ಬಗ್ಗೆ. ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಈ ಅಪಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.