وَإِذۡ قُلۡنَا لِلۡمَلَٰٓئِكَةِ ٱسۡجُدُواْ لِأٓدَمَ فَسَجَدُوٓاْ إِلَّآ إِبۡلِيسَ كَانَ مِنَ ٱلۡجِنِّ فَفَسَقَ عَنۡ أَمۡرِ رَبِّهِۦٓۗ أَفَتَتَّخِذُونَهُۥ وَذُرِّيَّتَهُۥٓ أَوۡلِيَآءَ مِن دُونِي وَهُمۡ لَكُمۡ عَدُوُّۢۚ بِئۡسَ لِلظَّٰلِمِينَ بَدَلٗا
ನಾವು ದೇವದೂತರುಗಳೊಡನೆ, “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ಹೇಳಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು. ಇಬ್ಲೀಸನ ಹೊರತು. ಅವನು ಜಿನ್ನ್‌ಗಳಲ್ಲಿ ಸೇರಿದ್ದನು. ಅವನು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದನು. ಹೀಗಿರುವಾಗ, ನೀವು ನನ್ನನ್ನು ಬಿಟ್ಟು ಅವನನ್ನು ಮತ್ತು ಅವನ ಸಂತಾನವನ್ನು ಮಿತ್ರರಾಗಿ ಸ್ವೀಕರಿಸುವಿರಾ? ವಾಸ್ತವವಾಗಿ ಅವರು ನಿಮ್ಮ ವೈರಿಗಳಾಗಿದ್ದೂ ಸಹ. ಅಕ್ರಮಿಗಳಿಗೆ ಬದಲಿಯಾಗಿ ಸಿಕ್ಕಿದ್ದು ಬಹಳ ನಿಕೃಷ್ಟವಾಗಿದೆ.