17 : 42
قُل لَّوۡ كَانَ مَعَهُۥٓ ءَالِهَةٞ كَمَا يَقُولُونَ إِذٗا لَّٱبۡتَغَوۡاْ إِلَىٰ ذِي ٱلۡعَرۡشِ سَبِيلٗا
ಹೇಳಿರಿ: “ಅವರು ಹೇಳುವಂತೆ ಅಲ್ಲಾಹನ ಜೊತೆಗೆ ಬೇರೆ ದೇವರುಗಳು ಇರುತ್ತಿದ್ದರೆ, ಅವರು ಖಂಡಿತವಾಗಿಯೂ ಸಿಂಹಾಸನದ ಒಡೆಯನ (ಅಲ್ಲಾಹನ) ಕಡೆಗೆ ಒಂದು ದಾರಿಯನ್ನು ಹುಡುಕುತ್ತಿದ್ದರು.”
Explanation & meanings · 1
- ಬಹುದೇವಾರಾಧಕರು ಹೇಳುವಂತೆ ಅಲ್ಲಾಹನೊಂದಿಗೆ ಬೇರೆ ದೇವರುಗಳು ಇರುತ್ತಿದ್ದರೆ ಅವರು ಅಲ್ಲಾಹನ ವಿರುದ್ಧ ಹೋರಾಡಿ ಅಧಿಕಾರ ವಶಪಡಿಸುವ ಮಾರ್ಗವನ್ನು ಹುಡುಕುತ್ತಿದ್ದರು. ಹಾಗೇನಾದರೂ ಸಂಭವಿಸುತ್ತಿದ್ದರೆ ವಿಶ್ವವು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೆ ಈ ತನಕ ಹಾಗೇನೂ ಸಂಭವಿಸಿಲ್ಲ. ಆದ್ದರಿಂದ ಅಲ್ಲಾಹನ ಹೊರತು ಬೇರೆ ದೇವರಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ.