ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ."
«مَنْ جَاءَ مِنْكُمُ الْجُمُعَةَ فَلْيَغْتَسِلْ».
ಜುಮಾ ನಮಾಝ್ ನಿರ್ವಹಿಸಲು ಬರುವವರಿಗೆ ದೊಡ್ಡ ಅಶುದ್ಧಿಗಾಗಿ (ಜನಾಬತ್) ಸ್ನಾನ ಮಾಡುವಂತೆ ಸ್ನಾನ ಮಾಡುವುದು ಅಪೇಕ್ಷಣೀಯವಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತುಕೊಟ್ಟು ಹೇಳಿದ್ದಾರೆ.
ಜುಮಾ ದಿನ (ಶುಕ್ರವಾರ) ಸ್ನಾನ ಮಾಡುವುದಕ್ಕೆ ಒತ್ತುಕೊಡಲಾಗಿದೆ. ಸತ್ಯವಿಶ್ವಾಸಿ ಶುಕ್ರವಾರ ಸ್ನಾನ ಮಾಡುವುದು ಸುನ್ನತ್ತಾಗಿದೆ. ಆ ಸ್ನಾನವು ಜುಮಾ ನಮಾಝ್‌ಗೆ ಹೊರಡುವಾಗ ನಿರ್ವಹಿಸುವುದು ಶ್ರೇಷ್ಠವಾಗಿದೆ.
ಸ್ವಚ್ಛತೆಯನ್ನು ಪ್ರೋತ್ಸಾಹಿಸಲಾಗಿದೆ. ಉತ್ತಮ ಪರಿಮಳವನ್ನು ಹೊಂದಿರುವುದು ಮುಸಲ್ಮಾನನ ಗುಣ ಮತ್ತು ಶಿಷ್ಟಾಚಾರಗಳಲ್ಲಿ ಒಳಪಡುತ್ತದೆ. ಜನರನ್ನು ಭೇಟಿಯಾಗುವಾಗ ಮತ್ತು ಅವರೊಡನೆ ಕೂರುವಾಗ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಜುಮಾ ಮತ್ತು ಜಮಾಅತ್ (ಸಾಮೂಹಿಕ) ನಮಾಝ್‌ಗಳಿಗೆ ಹಾಜರಾಗುವಾಗ.
ಹದೀಸಿನಲ್ಲಿರುವ ವಿಷಯವು ಜುಮಾ ಕಡ್ಡಾಯವಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಏಕೆಂದರೆ, ಅವರೇ ಜುಮಾ ನಮಾಝ್ ನಿರ್ವಹಿಸಲು ಬರುವವರು.
ಜುಮಾ ನಮಾಝ್ ನಿರ್ವಹಿಸಲು ಬರುವವರು ಸ್ವಚ್ಛವಾಗಿರುವುದು ಅಪೇಕ್ಷಣೀಯವಾಗಿದೆ. ದೇಹದ ದುರ್ಗಂಧವು ನಿವಾರಣೆಯಾಗುವಂತೆ ಸ್ನಾನ ಮಾಡಿ ನಂತರ ಸುಗಂಧ ಹಚ್ಚಬೇಕು. ಜುಮಾ ನಮಾಝ್ ನಿರ್ವಹಿಸಲು ಕೇವಲ ವುದೂ ನಿರ್ವಹಿಸಿ ಬಂದರೂ ಸಾಕಾಗುತ್ತದೆ.
ಸಹೀಹುಲ್ ಬುಖಾರಿ. (2/ 81) (1294).
ಸಹೀಹ್ ಮುಸ್ಲಿಮ್. (1/ 99) (103).
ಇನ್ನಷ್ಟು (6)
تيسير العلام شرح عمدة الأحكام.
لعبد الله البسام (ص239).
تنبيه الأفهام شرح عمدة الأحكام.
لابن عثيمين (2/ 302).
الإلمام بشرح عمدة الأحكام.
لإسماعيل الأنصاري (1/ 192).