"ಅತ್ಯುತ್ತಮ ಪೀಳಿಗೆಯು ನನ್ನ ಪೀಳಿಗೆಯಾಗಿದೆ. ನಂತರ ಅವರನ್ನು ಅನುಸರಿಸುವವರು, ನಂತರ ಅವರನ್ನು ಅನುಸರಿಸುವವರು."
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅತ್ಯುತ್ತಮ ಪೀಳಿಗೆಯು ನನ್ನ ಪೀಳಿಗೆಯಾಗಿದೆ. ನಂತರ ಅವರನ್ನು ಅನುಸರಿಸುವವರು, ನಂತರ ಅವರನ್ನು ಅನುಸರಿಸುವವರು." ಇಮ್ರಾನ್ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಂತರ ಎರಡು ಪೀಳಿಗೆಗಳನ್ನು ಉಲ್ಲೇಖಿಸಿದರೋ ಅಥವಾ ಮೂರನ್ನು ಉಲ್ಲೇಖಿಸಿದರೋ ಎಂದು ನನಗೆ ತಿಳಿದಿಲ್ಲ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) (ಮುಂದುವರಿಸಿ) ಹೇಳಿದರು: "ಖಂಡಿತವಾಗಿಯೂ ನಿಮ್ಮ ನಂತರ ಒಂದು ಜನಾಂಗ ಬರುತ್ತದೆ. ಅವರು ವಿಶ್ವಾಸದ್ರೋಹ ಮಾಡುತ್ತಾರೆ ಮತ್ತು ನಂಬಿಕೆಗೆ ಅರ್ಹರಾಗಿರುವುದಿಲ್ಲ. ಅವರು ಸಾಕ್ಷಿಗೆ ಕರೆಯದೆಯೇ ಸಾಕ್ಷ್ಯ ನುಡಿಯುತ್ತಾರೆ. ಅವರು ಹರಕೆ ಹೊರುತ್ತಾರೆ ಆದರೆ ಅದನ್ನು ನೆರವೇರಿಸುವುದಿಲ್ಲ. ಅವರಲ್ಲಿ (ಹೆಚ್ಚಾಗಿ) ಬೊಜ್ಜು ಕಾಣಿಸಿಕೊಳ್ಳುತ್ತದೆ."
«خَيْرُكُمْ قَرْنِي، ثُمَّ الَّذِينَ يَلُونَهُمْ، ثُمَّ الَّذِينَ يَلُونَهُمْ» قَالَ عِمْرَانُ: لاَ أَدْرِي أَذَكَرَ النَّبِيُّ صَلَّى اللهُ عَلَيْهِ وَسَلَّمَ بَعْدُ قَرْنَيْنِ أَوْ ثَلاَثَةً، قَالَ النَّبِيُّ صَلَّى اللهُ عَلَيْهِ وَسَلَّمَ: «إِنَّ بَعْدَكُمْ قَوْمًا يَخُونُونَ وَلاَ يُؤْتَمَنُونَ، وَيَشْهَدُونَ وَلاَ يُسْتَشْهَدُونَ، وَيَنْذِرُونَ وَلاَ يَفُونَ، وَيَظْهَرُ فِيهِمُ السِّمَنُ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ಕಾಲಘಟ್ಟದಲ್ಲಿ ಒಟ್ಟುಗೂಡಿದ ಜನರ ಪೈಕಿ ಅತ್ಯುತ್ತಮ ಪೀಳಿಗೆ ಯಾರೆಂದರೆ, ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಹಾಬಿಗಳು ಇದ್ದ ಪೀಳಿಗೆ. ನಂತರ ಅವರನ್ನು ಅನುಸರಿಸುವ ಸತ್ಯವಿಶ್ವಾಸಿಗಳು - ಇವರು ಸಹಾಬಿಗಳನ್ನು ಕಂಡಿದ್ದಾರೆ ಆದರೆ ಸಂದೇಶವಾಹಕರನ್ನು ಕಂಡಿರುವುದಿಲ್ಲ. ನಂತರ ಅವರನ್ನು ಅನುಸರಿಸುವವರು. ಇವರು ತಾಬಿಈನ್‌ಗಳನ್ನು ಅನುಸರಿಸಿದವರು (ಅತ್ಬಾಉತ್ತಾಬಿಈನ್). ಇವರ ನಂತರದ ನಾಲ್ಕನೇ ಪೀಳಿಗೆಯನ್ನು ಉಲ್ಲೇಖಿಸುವ ವಿಚಾರದಲ್ಲಿ ಸಹಾಬಿ (ಇಮ್ರಾನ್) ಅನುಮಾನ ವ್ಯಕ್ತಪಡಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಅವರ ನಂತರ ಒಂದು ಜನಾಂಗ ಬರುತ್ತದೆ. ಅವರು ವಿಶ್ವಾಸದ್ರೋಹ ಮಾಡುತ್ತಾರೆ ಮತ್ತು ಜನರು ಅವರನ್ನು ನಂಬುವುದಿಲ್ಲ. ಅವರು ಸಾಕ್ಷ್ಯಕ್ಕಾಗಿ ಕರೆಯುವ ಮೊದಲೇ ಸಾಕ್ಷ್ಯ ನುಡಿಯುತ್ತಾರೆ. ಅವರು ಹರಕೆ ಹೊರುತ್ತಾರೆ ಆದರೆ ಅದನ್ನು ನೆರವೇರಿಸುವುದಿಲ್ಲ. ಅವರು ಆಹಾರ ಪಾನೀಯಗಳಲ್ಲಿ ಮಿತಿಮೀರುತ್ತಾರೆ, ಎಷ್ಟರವರೆಗೆಂದರೆ ಅವರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ.
ಜಗತ್ತಿನ ಇತಿಹಾಸದಲ್ಲೇ ಅತ್ಯುತ್ತಮ ಪೀಳಿಗೆ ಮತ್ತು ಕಾಲವೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಹಾಬಿಗಳು ಬದುಕಿದ್ದ ಪೀಳಿಗೆ. ಸಹೀಹ್ ಬುಖಾರಿಯಲ್ಲಿ ವರದಿಯಾಗಿರುವಂತೆ ಅವರು ಹೇಳಿದರು: "ಆದಮರ ಮಕ್ಕಳ ಅತ್ಯುತ್ತಮ ಪೀಳಿಗೆಗಳಿಂದ, ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ನಾನು ರವಾನಿಸಲ್ಪಟ್ಟಿರುವೆನು. ಎಲ್ಲಿಯವರೆಗೆಂದರೆ ನಾನು ಈಗಿರುವ ಪೀಳಿಗೆಯಲ್ಲಿ ಜನಿಸಿ ಬರುವ ತನಕ".
ಇಬ್ನ್ ಹಜರ್ ಹೇಳುತ್ತಾರೆ: "ಸಹಾಬಿಗಳು ತಾಬಿಈನ್‌ಗಳಿಗಿಂತ ಶ್ರೇಷ್ಠರು, ಮತ್ತು ತಾಬಿಈನ್‌ಗಳು ಅತ್ಬಾಉ ತ್ತಾಬಿಈನ್‌ಗಳಿಗಿಂತ ಶ್ರೇಷ್ಠರು ಎಂದು ಈ ಹದೀಸ್ ಸೂಚಿಸುತ್ತದೆ. ಆದರೆ ಈ ಶ್ರೇಷ್ಠತೆಯು ಸಮೂಹಕ್ಕೆ ಸಂಬಂಧಿಸಿದೆಯೇ ಅಥವಾ ವ್ಯಕ್ತಿಗಳಿಗೆ ಸಂಬಂಧಿಸಿದೆಯೇ? ಇದು ಚರ್ಚಾಸ್ಪದ ವಿಷಯವಾಗಿದೆ. ಬಹುಪಾಲು ವಿದ್ವಾಂಸರು ಎರಡನೆಯದಕ್ಕೆ (ವ್ಯಕ್ತಿಗತ ಶ್ರೇಷ್ಠತೆಗೆ) ಒಲವು ತೋರಿದ್ದಾರೆ."
ಮೊದಲ ಮೂರು ಪೀಳಿಗೆಗಳ ಮಾರ್ಗವನ್ನು ಅನುಸರಿಸುವ ಅಗತ್ಯತೆಯನ್ನು ಸೂಚಿಸಲಾಗಿದೆ. ಏಕೆಂದರೆ ಯಾರ ಕಾಲವು ಪ್ರವಾದಿತ್ವದ ಕಾಲಕ್ಕೆ ಹತ್ತಿರವಾಗಿದೆಯೋ, ಅವರು ಶ್ರೇಷ್ಠತೆ, ಜ್ಞಾನ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಾರ್ಗದರ್ಶನವನ್ನು ಅನುಸರಿಸಲು ಮತ್ತು ಪಾಲಿಸಲು ಹೆಚ್ಚು ಅರ್ಹರಾಗಿರುತ್ತಾರೆ.
ನದ್ರ್ (ಹರಕೆ) ಎಂದರೆ ಧಾರ್ಮಿಕ ನಿಯಮಗಳಿಗೆ ಬದ್ಧನಾಗಿರಬೇಕಾದ ವ್ಯಕ್ತಿಯೊಬ್ಬನು ಶರೀಅತ್ ಕಡ್ಡಾಯಗೊಳಿಸಿರದ ಒಂದು ವಿಧೇಯತೆಯ ಕರ್ಮವನ್ನು, ಅದನ್ನು ಸೂಚಿಸುವ ಯಾವುದೇ ಮಾತಿನ ಮೂಲಕ, ತನ್ನ ಮೇಲೆ ಕಡ್ಡಾಯಗೊಳಿಸಿಕೊಳ್ಳುವುದಾಗಿದೆ.
ವಿಶ್ವಾಸದ್ರೋಹವನ್ನು, ಹರಕೆಯನ್ನು ನೆರವೇರಿಸದಿರುವುದನ್ನು ಮತ್ತು ಇಹಲೋಕಕ್ಕೆ ಅಂಟಿಕೊಳ್ಳುವುದನ್ನು ಖಂಡಿಸಲಾಗಿದೆ.
ಹಕ್ಕುದಾರನಿಗೆ ಸಾಕ್ಷಿಯ ಬಗ್ಗೆ ತಿಳಿದಿದ್ದರೆ, ಕರೆಯದೆಯೇ ಸಾಕ್ಷ್ಯ ನುಡಿಯುವುದನ್ನು ಖಂಡಿಸಲಾಗಿದೆ. ಆದರೆ, ಹಕ್ಕುದಾರನಿಗೆ ಸಾಕ್ಷಿಯ ಬಗ್ಗೆ ತಿಳಿಯದಿದ್ದರೆ, ಅದು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಈ ವಚನದಲ್ಲಿ ಒಳಪಡುತ್ತದೆ: "ಸಾಕ್ಷಿಗಳಲ್ಲಿ ಅತ್ಯುತ್ತಮರು ಯಾರೆಂದು ನಾನು ನಿಮಗೆ ತಿಳಿಸಲೇ? ಅವರು ಸಾಕ್ಷ್ಯಕ್ಕಾಗಿ ಕರೆಯುವ ಮೊದಲೇ ಸಾಕ್ಷ್ಯವನ್ನು ತರುವವರು" (ಮುಸ್ಲಿಂ).
ಸಹೀಹುಲ್ ಬುಖಾರಿ. (3/ 171) (2651).
ಸಹೀಹ್ ಮುಸ್ಲಿಮ್. (4/ 1964) (2535).
(3/ 1344) (1719).
ಇನ್ನಷ್ಟು (2)
النهاية في غريب الحديث والأثر (747).
نيل الأوطار (8/ 341).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
4 ಗ್ರಂಥಗಳುಇನ್ನಷ್ಟು (4)
- الخطب المنبرية موسوعة الخطب المنبرية (القسم الثاني)«خَيْرُ النَّاسِ قَرْنِي، ثُمَّ الَّذِينَ يَلُونَهُمْ، ثُمَّ الَّذِينَ يَلُونَهُمْ»
- فهم السلف الصالح للنصوص الشرعية والرد على الشبهات حوله"خيركم قرني، ثم الذين يلونهم، ثم الذين يلونهم"[8].
- مجموعة زاد التربية الإسلامية (1)، والسيرة النبوبة (1)، والعقيدة (1)، والفقه (1)التربية الأسلامية 1« خيْرُ النّاسِ قرْنِي، ثُمّ الّذِين يلُونهُمْ، ثُمّ الّذِين يلُونهُمْ»
- مشروع منهاج زادكزادك 3 طالب نهائي«خَيْرُ النَّاسِ قَرْنِي، ثُمَّ الَّذِينَ يَلُونَهُمْ، ثُمَّ الَّذِينَ يَلُونَهُمْ»