Skip to content

ನನ್ನ ಮೇಲೆ ಮನಃಪೂರ್ವಕ ಸುಳ್ಳು ಹೇಳುವವರು ನರಕಾಗ್ನಿಯಲ್ಲಿ ಅವರ ಆಸನವನ್ನು ಸಿದ್ಧಪಡಿಸಿಕೊಳ್ಳಲಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ನನ್ನ ಮೇಲೆ ಮನಃಪೂರ್ವಕ ಸುಳ್ಳು ಹೇಳುವವರು ನರಕಾಗ್ನಿಯಲ್ಲಿ ಅವರ ಆಸನವನ್ನು ಸಿದ್ಧಪಡಿಸಿಕೊಳ್ಳಲಿ."

«مَنْ كَذَبَ عَلَيَّ مُتَعَمِّدًا فَلْيَتَبَوَّأْ مَقْعَدَهُ مِنَ النَّارِ».

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಅವರ ಮೇಲೆ ಮನಃಪೂರ್ವಕ ಸುಳ್ಳು ಹೇಳುತ್ತಾರೋ, ಅದು ಮಾತು ಅಥವಾ ಕ್ರಿಯೆಯ ಬಗ್ಗೆಯಾಗಿದ್ದರೂ, ಅವರ ಮೇಲೆ ಸುಳ್ಳು ಹೇಳಿದ್ದಕ್ಕಾಗಿ ಪರಲೋಕದಲ್ಲಿ ಅವರಿಗೆ ನರಕದಲ್ಲಿ ಆಸನ ದೊರೆಯುವುದು.

ಪದಗಳ ಅರ್ಥ

...:

ಹದೀಸಿನ ಪ್ರಯೋಜನಗಳು

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಉದ್ದೇಶಪೂರ್ವಕ ಸುಳ್ಳು ಹೇಳುವುದು ನರಕ ಪ್ರವೇಶಕ್ಕೆ ಕಾರಣವಾಗುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸುಳ್ಳು ಹೇಳುವುದು ಇತರ ಜನರ ಮೇಲೆ ಸುಳ್ಳು ಹೇಳಿದಂತಲ್ಲ. ಏಕೆಂದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸುಳ್ಳು ಹೇಳುವುದು ಧಾರ್ಮಿಕವಾದ ಮತ್ತು ಲೌಕಿಕವಾದ ಅತಿದೊಡ್ಡ ಹಾನಿಗೆ ಕಾರಣವಾಗುತ್ತದೆ.

ಯಾವುದೇ ಹದೀಸನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಬಂಧಿಸಿದ್ದೆಂದು ಖಚಿತವಾಗಿ ದೃಢೀಕರಿಸುವ ಮೊದಲು ಪ್ರಚಾರ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ.

ಉಲ್ಲೇಖಗಳು

ಸಹೀಹುಲ್ ಬುಖಾರಿ. (1/ 33) (110).

ಸಹೀಹ್ ಮುಸ್ಲಿಮ್. (1/ 10) (3).

ಇನ್ನಷ್ಟು (5)

إكمال المعلم (1/111).

شرح النووي على مسلم (1/65).

المفهم (1/32).

عمدة القاري شرح صحيح البخاري (2/ 151).

شرح مقدمة سنن ابن ماجه (5/ 8).