ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ
ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ."
«مَنْ تَوَضَّأَ فَأَحْسَنَ الْوُضُوءَ خَرَجَتْ خَطَايَاهُ مِنْ جَسَدِهِ حَتَّى تَخْرُجَ مِنْ تَحْتِ أَظْفَارِهِ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ವುದೂವಿನ ಐಚ್ಛಿಕ ಕಾರ್ಯಗಳು ಮತ್ತು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸುತ್ತಾ ಯಾರು ವುದೂ ನಿರ್ವಹಿಸುತ್ತಾರೋ, ಅದು ಅವರ ಪಾಪಗಳು ಪರಿಹಾರವಾಗಲು ಮತ್ತು ದೋಷಗಳು ನಿವಾರಣೆಯಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ, ಅವರ ಕೈಗಳ ಮತ್ತು ಪಾದಗಳ ಉಗುರುಗಳ ಅಡಿಭಾಗದಿಂದಲೂ ಪಾಪಗಳು ನಿವಾರಣೆಯಾಗುತ್ತವೆ.
...:
ವುದೂ, ಅದರ ಐಚ್ಛಿಕ ಕಾರ್ಯಗಳು ಮತ್ತು ಅದರ ಶಿಷ್ಟಾಚಾರಗಳನ್ನು ಸರಿಯಾಗಿ ಕಲಿತು, ಅದರಂತೆ ವುದೂ ನಿರ್ವಹಿಸಲು ಕಾಳಜಿ ತೋರಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.
ವುದೂವಿನ ಶ್ರೇಷ್ಠತೆಯನ್ನು ಮತ್ತು ಅದು ಸಣ್ಣ ಪಾಪಗಳಿಗೆ ಪರಿಹಾರವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಮಹಾಪಾಪಗಳಿಗೆ ಪಶ್ಚಾತ್ತಾಪ (ತೌಬ) ಕಡ್ಡಾಯವಾಗಿದೆ.
ಪಾಪಗಳು ದೇಹದಿಂದ ನಿವಾರಣೆಯಾಗಬೇಕಾದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಸಿಕೊಟ್ಟ ರೀತಿಯಲ್ಲಿ ಪೂರ್ಣವಾಗಿ ಯಾವುದೇ ಲೋಪಗಳನ್ನು ಮಾಡದೆ ವುದೂ ನಿರ್ವಹಿಸಬೇಕಾಗಿದೆ.
ಈ ಹದೀಸಿನಲ್ಲಿ ಹೇಳಲಾದಂತೆ ಸಣ್ಣ ಪಾಪಗಳು ಪರಿಹಾರವಾಗಬೇಕಾದರೆ, ಮಹಾಪಾಪಗಳಿಂದ ದೂರವಿರುವುದು ಮತ್ತು ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಿದ್ದರೆ, ನಿಮ್ಮ ಸಣ್ಣ ಪಾಪಗಳನ್ನು ನಾವು ಅಳಿಸಿಬಿಡುವೆವು." [ನಿಸಾಅ್ 31]
ಸಹೀಹ್ ಮುಸ್ಲಿಮ್. (1/ 216) (245).
ಇನ್ನಷ್ಟು (6)
شرح رياض الصالحين.
لابن عثيمين (5/ 9).
نزهة المتقين شرح رياض الصالحين.
لمصطفى الخِن وغيره (2/ 763).
بهجة الناظرين.
سليم الهلالي (2/ 247).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
8 ಗ್ರಂಥಗಳು- ಮುಸಲ್ಮಾನರಿಗೆ ಸಂಕ್ಷಿಪ್ತ ಹಾಗೂ ಉಪಯುಕ್ತ ಕೈಪಿಡಿ“ಯಾರು ಅತ್ಯುತ್ತಮವಾಗಿ ವುಝು ನಿರ್ವಹಿಸುತ್ತಾರೋ ಅವರ ದೇಹದಿಂದ ಪಾಪಗಳು ಹೊರಹೋಗುತ್ತವೆ. ಎಲ್ಲಿಯವರೆಗೆಂದರೆ ಅವರ ಉಗುರುಗಳ ಅಡಿಭಾಗಗಳಿಂದಲೂ ಕೂಡ.”
- ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ“ಯಾರು ಚೆನ್ನಾಗಿ ವುಝು ಮಾಡುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಹೋಗುತ್ತವೆ.”
ಇನ್ನಷ್ಟು (6)
- المنتقى من المتجر الرابح في ثواب العمل الصالح - المعتمدالمنتقى من المتجر الرابح في ثواب العمل الصالح“من توضأ فأحسن الوضوء خرجت خطاياه من جسده حتى تخرج من تحت أظفاره”.
- خطب تعظيم قدر الصلاة"مَنْ تَوَضَّأَ فَأَحْسَنَ الْوُضُوءَ خَرَجَتْ خَطَايَاهُ مِنْ جَسَدِهِ، حَتَّى تَخْرُجَ مِنْ تَحْتِ أَظْفَارِهِ" رواه مسلم [26]،
- رياض الصالحينرياض الصالحين مع فوائد وهدايات - 5«مَنْ تَوَضَّأَ فَأَحْسَنَ الوُضُوءَ، خَرَجَتْ خَطَايَاهُ مِنْ جَسَدِهِ حَتَّىٰ تَخْرُجَ مِنْ تَحْتِ أَظفارِه».
- مجموعة زاد الحديث(3)1«من توضَّأ فأحْسَنَ الوُضُوءَ خَرَجَت خطاياه من جَسَدِهِ حتى تخرجَ من تحتِ أظفارِهِ»
- مشروع منهاج زادكزادك 1 طالب«مَنْ تَوَضَّأَ فَأَحْسَنَ الْوُضُوءَ خَرَجَتْ خَطَايَاهُ مِنْ جَسَدِهِ، حَتَّى تَخْرُجَ مِنْ تَحْتِ أَظْفَارِهِ»
- من الأحكام الفقهية في الطهارة والصلاة والجنائز«مَنْ تَوَضَّأَ فَأَحْسَنَ الْوُضُوءَ خَرَجَتْ خَطَايَاهُ مِنْ جَسَدِهِ، حَتَّى تَخْرُجَ مِنْ تَحْتِ أَظْفَارِهِ»