Skip to content

ಪೋಷಕನಿಲ್ಲದಿದ್ದರೆ ವಿವಾಹವಿಲ್ಲ

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."

«لا نِكَاحَ إِلّا بِوَليٍّ».

ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ವಿವಾಹ ಕರಾರನ್ನು ನಡೆಸಿಕೊಡುವ ಪೋಷಕರ ಅನುಪಸ್ಥಿತಿಯಲ್ಲಿ ಒಬ್ಬ ಮಹಿಳೆ ವಿವಾಹವಾದರೆ ಆ ವಿವಾಹ ಸಿಂಧುವಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ.

ಪದಗಳ ಅರ್ಥ

لا نكاح : لا نكاح صحيح ومعتبر شرعًا.

الوَلِيُّ : هو أقرب الرجال إلى المرأة من عصبتها الذين يرثونها، كالأب والأخ.

ಹದೀಸಿನ ಪ್ರಯೋಜನಗಳು

ವಿವಾಹ ಸಿಂಧುವಾಗಲು ಪೋಷಕರ ಉಪಸ್ಥಿತಿಯು ಷರತ್ತಾಗಿದೆ. ಪೋಷಕನ ಅನುಪಸ್ಥಿತಿಯಲ್ಲಿ ವಿವಾಹ ನಡೆದರೆ, ಅಥವಾ ಮಹಿಳೆಯೊಬ್ಬಳು ಸ್ವಯಂ ವಿವಾಹವಾದರೆ, ಆ ವಿವಾಹ ಸಿಂಧುವಲ್ಲ.

ಪೋಷಕರು ಎಂದರೆ ಮಹಿಳೆಗೆ ಅತೀ ಹತ್ತಿರದ ಪುರುಷ ಸಂಬಂಧಿ. ಹತ್ತಿರದ ಸಂಬಂಧಿಗಳಿರುವಾಗ ದೂರದ ಸಂಬಂಧಿಗಳು ಪೋಷಕರ ಸ್ಥಾನ ವಹಿಸಿ ವಿವಾಹ ನಡೆಸಿಕೊಡಬಾರದು.

ಪೋಷಕರಿಗೆ ಸಂಬಂಧಿಸಿದ ಷರತ್ತುಗಳು: ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧನಾಗಿರುವುದು, ಪುರುಷನಾಗಿರುವುದು, ವಿವಾಹದ ಸಾಧಕ-ಬಾಧಕಗಳ ಬಗ್ಗೆ ತಿಳುವಳಿಕೆಯಿರುವುದು, ವಧು ಮತ್ತು ಪೋಷಕರು ಒಂದೇ ಧರ್ಮದವರಾಗಿರುವುದು. ಯಾರಿಗೆ ಈ ಗುಣಗಳ ಕೊರತೆಯಿದೆಯೋ ಅವರು ವಿವಾಹ ನಡೆಸಿಕೊಡುವ ಪೋಷಕ ಸ್ಥಾನ ವಹಿಸಲು ಅರ್ಹರಲ್ಲ.

ಉಲ್ಲೇಖಗಳು

ಸುನನ್ ಅಬೂ ದಾವೂದ್. (3/ 427) (2085).

ಸುನನು ತ್ತಿರ್ಮಿದಿ. (2/ 392) (1101).

ಸುನನ್ ಇಬ್ನ್ ಮಾಜ. (3/ 79) (1881).

ಮುಸ್ನದ್ ಅಹ್ಮದ್. (32/ 280) (19518).

ಇನ್ನಷ್ಟು (10)

البدرُ التمام شرح بلوغ المرام.

للمَغرِبي (7/ 57).

إرواء الغليل في تخريج أحاديث منار السبيل.

للألباني (6/ 237).

توضِيح الأحكام من بلوغ المَرَام.

للبسام (5/ 262).

منحة العلام في شرح بلوغ المرام.

لعبد الله الفوزان (7/ 222).

فتح ذي الجلال والإكرام بشرح بلوغ المرام.

لابن عثيمين (4/ 469).