Skip to content

"ನಿಮ್ಮಲ್ಲಿ ನನಗೆ ಅತ್ಯಂತ ಪ್ರಿಯರು ಮತ್ತು ಪುನರುತ್ಥಾನ ದಿನದಂದು ನನಗೆ ಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿರುವವರು ಯಾರೆಂದರೆ, ನಿಮ್ಮಲ್ಲಿ ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವವರು.

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ನಿಮ್ಮಲ್ಲಿ ನನಗೆ ಅತ್ಯಂತ ಪ್ರಿಯರು ಮತ್ತು ಪುನರುತ್ಥಾನ ದಿನದಂದು ನನಗೆ ಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿರುವವರು ಯಾರೆಂದರೆ, ನಿಮ್ಮಲ್ಲಿ ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವವರು. ಮತ್ತು ನಿಮ್ಮಲ್ಲಿ ನನಗೆ ಅತ್ಯಂತ ಅಪ್ರಿಯರು (ದ್ವೇಷಕ್ಕೆ ಪಾತ್ರರಾದವರು) ಮತ್ತು ಪುನರುತ್ಥಾನ ದಿನದಂದು ನನ್ನ ಸ್ಥಾನದಿಂದ ಅತ್ಯಂತ ದೂರದಲ್ಲಿರುವವರು ಯಾರೆಂದರೆ, 'ಸರ್ಸಾರೂನ್', 'ಮುತಶದ್ದಿಖೂನ್' ( ಮತ್ತು 'ಮುತಫೈಹಿಖೂನ್' ". (ಇದನ್ನು ಕೇಳಿ) ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, 'ಸರ್ಸಾರೂನ್' ಮತ್ತು 'ಮುತಶದ್ದಿಖೂನ್' ಯಾರೆಂದು ನಮಗೆ ತಿಳಿದಿದೆ, ಆದರೆ 'ಮುತಫೈಹಿಖೂನ್' ಯಾರು?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಹಂಕಾರಿಗಳು".

«إِنَّ مِنْ أَحَبِّكُمْ إِلَيَّ وَأَقْرَبِكُمْ مِنِّي مَجْلِسًا يَوْمَ القِيَامَةِ أَحَاسِنَكُمْ أَخْلاَقًا، وَإِنَّ أَبْغَضَكُمْ إِلَيَّ وَأَبْعَدَكُمْ مِنِّي مَجْلِسًا يَوْمَ القِيَامَةِ الثَّرْثَارُونَ وَالمُتَشَدِّقُونَ وَالمُتَفَيْهِقُونَ»، قَالُوا: يَا رَسُولَ اللهِ، قَدْ عَلِمْنَا الثَّرْثَارُونَ وَالمُتَشَدِّقُونَ فَمَا الْمُتَفَيْهِقُونَ؟ قَالَ: «الْمُتَكَبِّرُونَ».

ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಈ ಜಗತ್ತಿನಲ್ಲಿ ನಿಮ್ಮಲ್ಲಿ ಅವರಿಗೆ ಅತ್ಯಂತ ಪ್ರಿಯರಾದವರು ಮತ್ತು ಪುನರುತ್ಥಾನ ದಿನದಂದು ಅವರ ಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿರುವವರು ಯಾರೆಂದರೆ, ನಿಮ್ಮಲ್ಲಿ ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವವರು. ಮತ್ತು ಈ ಜಗತ್ತಿನಲ್ಲಿ ಅವರಿಗೆ ಅತ್ಯಂತ ಅಪ್ರಿಯರಾದವರು ಮತ್ತು ಪುನರುತ್ಥಾನ ದಿನದಂದು ಅವರ ಸ್ಥಾನದಿಂದ ಅತ್ಯಂತ ದೂರದಲ್ಲಿರುವವರು ಯಾರೆಂದರೆ, ನಿಮ್ಮಲ್ಲಿ ಕೆಟ್ಟ ನಡವಳಿಕೆಯನ್ನು ಹೊಂದಿರುವವರು. ಅವರು ಯಾರೆಂದರೆ: "ಸರ್ಸಾರೂನ್": ಕೃತಕವಾಗಿ ಮತ್ತು ಸತ್ಯದಿಂದ ವಿಮುಖರಾಗಿ ಅತಿಯಾಗಿ ಮಾತನಾಡುವವರು. "ಮುತಶದ್ದಿಖೂನ್ ": ಎಚ್ಚರಿಕೆ ಮತ್ತು ಮುಂಜಾಗ್ರತೆಯಿಲ್ಲದೆ, ತಮ್ಮ ಮಾತನ್ನು ದೊಡ್ಡದು ಮಾಡಿ ಮತ್ತು ವಾಕ್ಚಾತುರ್ಯವನ್ನು ಪ್ರದರ್ಶಿಸುತ್ತಾ ವಿಸ್ತಾರವಾಗಿ ಮಾತನಾಡುವವರು (ಕೆಲವೊಮ್ಮೆ ಬಾಯಿ ಚಪ್ಪರಿಸುತ್ತಾ ಅಥವಾ ತಿರುಚಿ ಮಾತನಾಡುವವರು). "ಮುತಫೈಹಿಖೂನ್": ಸಹಾಬಿಗಳು ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, 'ಸರ್ಸಾರೂನ್' ಮತ್ತು 'ಮುತಶದ್ದಿಖೂನ್' ಯಾರೆಂದು ನಮಗೆ ತಿಳಿದಿದೆ. ಆದರೆ 'ಮುತಫೈಹಿಖೂನ್' ಯಾರು? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅಹಂಕಾರಿಗಳು, ಜನರನ್ನು ಗೇಲಿ ಮಾಡುವವರು, ವಿಸ್ತಾರವಾಗಿ ಮಾತನಾಡುವವರು ಮತ್ತು ಹಾಗೆ ಮಾಡುವಾಗ ತಮ್ಮ ಬಾಯಿಗಳನ್ನು ಅಗಲವಾಗಿ ತೆರೆಯುವವರು.

ಹದೀಸಿನ ಪ್ರಯೋಜನಗಳು

ಉತ್ತಮ ನಡವಳಿಕೆಯು ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಗೆ ಮತ್ತು ಪುನರುತ್ಥಾನ ದಿನದಂದು ಅವರ ಸಾಮೀಪ್ಯಕ್ಕೆ ಕಾರಣವಾಗುತ್ತದೆ. ಕೆಟ್ಟ ನಡವಳಿಕೆಯು ಇದಕ್ಕೆ ವಿರುದ್ಧವಾಗಿರುತ್ತದೆ.

ಉತ್ತಮ ನಡವಳಿಕೆಯು ಜನರ ನಡುವೆ ಪರಸ್ಪರ ಪ್ರೀತಿಗೆ ಕಾರಣವಾಗುತ್ತದೆ. ಕೆಟ್ಟ ನಡವಳಿಕೆಯು ಇದಕ್ಕೆ ವಿರುದ್ಧವಾಗಿರುತ್ತದೆ.

ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಲು, ವಿನಮ್ರರಾಗಿರಲು ಮತ್ತು ಒರಟುತನ ಹಾಗೂ ಕೃತಕತೆಯನ್ನು ತೊರೆಯಲು ಪ್ರೋತ್ಸಾಹಿಸಲಾಗಿದೆ.

ಅತಿಯಾಗಿ, ಅಹಂಕಾರದಿಂದ, ದೊಡ್ಡಸ್ತಿಕೆಯಿಂದ ಮತ್ತು ಕೃತಕವಾಗಿ ಮಾತನಾಡುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಉಲ್ಲೇಖಗಳು

ಸುನನು ತ್ತಿರ್ಮಿದಿ. (3/ 545) (2018).

ಇನ್ನಷ್ಟು (4)

بهجة الناظرين شرح رياض الصالحين.

لسليم الهلالي (1/ 676).

تحفة الأحوذي.

للمباركفوري (6/ 135).