Skip to content
ಸೂರಗಳ ಪಟ್ಟಿ /

الطَّلَاق

الطَّلَاق is chapter 65 of the Quran and has 12 verses. This page presents it in full in the Uthmani script, with a verse-by-verse translation of its meaning.

12 ಆಯತ್‌ಗಳು ಸೂರ ಸಂಖ್ಯೆ 65
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

يَٰٓأَيُّهَا ٱلنَّبِيُّ إِذَا طَلَّقۡتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحۡصُواْ ٱلۡعِدَّةَۖ وَٱتَّقُواْ ٱللَّهَ رَبَّكُمۡۖ لَا تُخۡرِجُوهُنَّ مِنۢ بُيُوتِهِنَّ وَلَا يَخۡرُجۡنَ إِلَّآ أَن يَأۡتِينَ بِفَٰحِشَةٖ مُّبَيِّنَةٖۚ وَتِلۡكَ حُدُودُ ٱللَّهِۚ وَمَن يَتَعَدَّ حُدُودَ ٱللَّهِ فَقَدۡ ظَلَمَ نَفۡسَهُۥۚ لَا تَدۡرِي لَعَلَّ ٱللَّهَ يُحۡدِثُ بَعۡدَ ذَٰلِكَ أَمۡرٗا

ಓ ಪ್ರವಾದಿಯವರೇ! (ನಿಮ್ಮ ಅನುಯಾಯಿಗಳೊಡನೆ ಹೇಳಿರಿ): “ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ (ತಲಾಕ್) ನೀಡುವುದಾದರೆ, ಅವರ ಇದ್ದತ್‌ನ (ದೀಕ್ಷಾಕಾಲದ) ಆರಂಭವನ್ನು ಲೆಕ್ಕಹಾಕಿ ವಿಚ್ಛೇದಿಸಿರಿ ಮತ್ತು ಇದ್ದತ್‌ನ ಲೆಕ್ಕವನ್ನು ಇಟ್ಟುಕೊಳ್ಳಿ. ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ. ಅವರನ್ನು ಅವರ ಮನೆಗಳಿಂದ ಹೊರಹಾಕಬೇಡಿ ಮತ್ತು ಅವರು ಕೂಡ (ಸ್ವತಃ) ಮನೆಯಿಂದ ಹೊರಹೋಗದಿರಲಿ. ಅವರು ಸ್ಪಷ್ಟ ನೀಚಕೃತ್ಯವನ್ನು ಮಾಡಿದರೆ ಹೊರತು. ಇವು ಅಲ್ಲಾಹನ ಎಲ್ಲೆಗಳಾಗಿವೆ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರುತ್ತಾನೋ ಅವನು ಸ್ವಯಂ ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹು ಇದರ ನಂತರ ಏನಾದರೂ ಹೊಸದನ್ನು ತರುವನೋ ಎಂದು ನಿಮಗೆ ತಿಳಿದಿಲ್ಲ.

Explanation & meanings · 1
  1. ಅಂದರೆ ಪತ್ನಿ ಋತುಸ್ರಾವದಿಂದ ಶುದ್ಧಿಯಾಗಿ ಆಕೆಯೊಡನೆ ಸಂಭೋಗ ನಡೆಸುವ ಮುನ್ನ ತಲಾಕ್ (ವಿಚ್ಛೇದನ) ನೀಡಿರಿ. ಮಹಿಳೆಯ ಶುದ್ಧಾವಸ್ಥೆಯು ಇದ್ದತ್‌ನ ಆರಂಭವಾಗಿದೆ. ಋತುಸ್ರಾವದ ಅವಧಿಯಲ್ಲಿ ಅಥವಾ ಶುದ್ಧಿಯಾಗಿ ಸಂಭೋಗ ನಡೆಸಿದ ನಂತರ ತಲಾಕ್ ನೀಡಬಾರದು.

فَإِذَا بَلَغۡنَ أَجَلَهُنَّ فَأَمۡسِكُوهُنَّ بِمَعۡرُوفٍ أَوۡ فَارِقُوهُنَّ بِمَعۡرُوفٖ وَأَشۡهِدُواْ ذَوَيۡ عَدۡلٖ مِّنكُمۡ وَأَقِيمُواْ ٱلشَّهَٰدَةَ لِلَّهِۚ ذَٰلِكُمۡ يُوعَظُ بِهِۦ مَن كَانَ يُؤۡمِنُ بِٱللَّهِ وَٱلۡيَوۡمِ ٱلۡأٓخِرِۚ وَمَن يَتَّقِ ٱللَّهَ يَجۡعَل لَّهُۥ مَخۡرَجٗا

ಅವರು (ವಿಚ್ಛೇದಿತೆಯರು) ತಮ್ಮ ಇದ್ದತ್‌ನ ಅವಧಿಯನ್ನು ಪೂರ್ತಿ ಮಾಡುವ ಹಂತಕ್ಕೆ ತಲುಪಿದರೆ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ನಿಮ್ಮ ಬಳಿ (ಪತ್ನಿಯಾಗಿ) ಇರಿಸಿಕೊಳ್ಳಿರಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಬಿಡುಗಡೆ ಮಾಡಿರಿ. ನಿಮ್ಮಲ್ಲಿನ ಇಬ್ಬರು ನ್ಯಾಯವಂತರನ್ನು ಸಾಕ್ಷಿ ನಿಲ್ಲಿಸಿರಿ. ಅಲ್ಲಾಹನ ಸಂಪ್ರೀತಿಗಾಗಿ ಸರಿಯಾದ ರೀತಿಯಲ್ಲಿ ಸಾಕ್ಷಿ ಹೇಳಿರಿ. ಇದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡಲಾಗುವ ಉಪದೇಶವಾಗಿದೆ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನಿಗೆ ಅಲ್ಲಾಹು ನಿರ್ಗಮನ ದ್ವಾರವನ್ನು ಮಾಡಿಕೊಡುತ್ತಾನೆ.

وَيَرۡزُقۡهُ مِنۡ حَيۡثُ لَا يَحۡتَسِبُۚ وَمَن يَتَوَكَّلۡ عَلَى ٱللَّهِ فَهُوَ حَسۡبُهُۥٓۚ إِنَّ ٱللَّهَ بَٰلِغُ أَمۡرِهِۦۚ قَدۡ جَعَلَ ٱللَّهُ لِكُلِّ شَيۡءٖ قَدۡرٗا

ಅವನು ಊಹಿಸಿರದ ಕಡೆಯಿಂದ ಅವನಿಗೆ ಉಪಜೀವನವನ್ನು ಒದಗಿಸುತ್ತಾನೆ. ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾನೋ ಅವನಿಗೆ ಅಲ್ಲಾಹು ಸಾಕು. ಅಲ್ಲಾಹು ತನ್ನ ಕಾರ್ಯವನ್ನು ಖಂಡಿತ ಪೂರ್ಣಗೊಳಿಸುತ್ತಾನೆ. ಅಲ್ಲಾಹು ಪ್ರತಿಯೊಂದು ವಸ್ತುವಿಗೂ ಒಂದು ನಿಶ್ಚಿತ ನಿರ್ಣಯವನ್ನು ಮಾಡಿದ್ದಾನೆ.

وَٱلَّٰٓـِٔي يَئِسۡنَ مِنَ ٱلۡمَحِيضِ مِن نِّسَآئِكُمۡ إِنِ ٱرۡتَبۡتُمۡ فَعِدَّتُهُنَّ ثَلَٰثَةُ أَشۡهُرٖ وَٱلَّٰٓـِٔي لَمۡ يَحِضۡنَۚ وَأُوْلَٰتُ ٱلۡأَحۡمَالِ أَجَلُهُنَّ أَن يَضَعۡنَ حَمۡلَهُنَّۚ وَمَن يَتَّقِ ٱللَّهَ يَجۡعَل لَّهُۥ مِنۡ أَمۡرِهِۦ يُسۡرٗا

ನಿಮ್ಮ ಮಹಿಳೆಯರಲ್ಲಿ ಋತುಸ್ರಾವದ ಬಗ್ಗೆ ನಿರೀಕ್ಷೆ ಕಳಕೊಂಡವರು ಯಾರೋ—ನಿಮಗೆ ಸಂದೇಹವಿದ್ದರೆ ಅವರ ಇದ್ದತ್ (ದೀಕ್ಷಾಕಾಲ) ಮೂರು ತಿಂಗಳುಗಳಾಗಿವೆ. ಅದೇ ರೀತಿ ಋತುಸ್ರಾವ ಪ್ರಾರಂಭವಾಗದಿರುವವರು ಕೂಡ. ಗರ್ಭಿಣಿಯರ ಇದ್ದತ್ ಅವರು ಮಗುವಿಗೆ ಜನ್ಮ ನೀಡುವ ತನಕ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನಿಗೆ ಅಲ್ಲಾಹು ಅವನ ವಿಷಯವನ್ನು ಸುಲಭಗೊಳಿಸುತ್ತಾನೆ.

Explanation & meanings · 2
  1. ಅಂದರೆ ಮುಟ್ಟು ನಿಂತವರು.
  2. ಅಂದರೆ ಮುಟ್ಟು ಪ್ರಾರಂಭವಾಗದವರು. ಕೆಲವೊಮ್ಮೆ ಹುಡುಗಿಯರು ಪ್ರೌಢಾವಸ್ಥೆಗೆ ತಲುಪಿಯೂ ಕೂಡ ಮುಟ್ಟು ಪ್ರಾರಂಭವಾಗದ ಸನ್ನಿವೇಶಗಳಿವೆ.

ذَٰلِكَ أَمۡرُ ٱللَّهِ أَنزَلَهُۥٓ إِلَيۡكُمۡۚ وَمَن يَتَّقِ ٱللَّهَ يُكَفِّرۡ عَنۡهُ سَيِّـَٔاتِهِۦ وَيُعۡظِمۡ لَهُۥٓ أَجۡرًا

ಇದು ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಅವನ ಆಜ್ಞೆಯಾಗಿದೆ. ಯಾರು ಅಲ್ಲಾಹನನ್ನು ಭಯಪಡುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸುತ್ತಾನೆ ಮತ್ತು ಅವನಿಗೆ ಮಹಾ ಪ್ರತಿಫಲವನ್ನು ನೀಡುತ್ತಾನೆ.