Skip to content
المَائدة /

ಆಯತ್ 13

5 : 13

ಆಯತ್ 13 of المَائدة (5 : 13). This page carries the verse in the Uthmani script with a translation of its meaning, at a stable URL that can be cited on its own.

المَائدة ಆಯತ್‌ಗಳು 120
ಸೂರ · المَائدة
ಕನ್ನಡ · Hamza
5 : 13

فَبِمَا نَقۡضِهِم مِّيثَٰقَهُمۡ لَعَنَّٰهُمۡ وَجَعَلۡنَا قُلُوبَهُمۡ قَٰسِيَةٗۖ يُحَرِّفُونَ ٱلۡكَلِمَ عَن مَّوَاضِعِهِۦ وَنَسُواْ حَظّٗا مِّمَّا ذُكِّرُواْ بِهِۦۚ وَلَا تَزَالُ تَطَّلِعُ عَلَىٰ خَآئِنَةٖ مِّنۡهُمۡ إِلَّا قَلِيلٗا مِّنۡهُمۡۖ فَٱعۡفُ عَنۡهُمۡ وَٱصۡفَحۡۚ إِنَّ ٱللَّهَ يُحِبُّ ٱلۡمُحۡسِنِينَ

ಅವರು ಕರಾರು ಉಲ್ಲಂಘಿಸಿದ ಕಾರಣ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ. ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತೇ ಬಿಟ್ಟರು. ಅವರು ಮಾಡುವ ವಂಚನೆಯನ್ನು ನೀವು ಗಮನಿಸುತ್ತಲೇ ಇರುವಿರಿ—ಅವರಲ್ಲಿ ಕೆಲವರ ಹೊರತು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪನ್ನು) ಕಡೆಗಣಿಸಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.

Explanation & meanings · 1
  1. ಅಂದರೆ ಅವರು ಗ್ರಂಥದ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ ಮತ್ತು ತಪ್ಪು ಅರ್ಥಗಳನ್ನು ನೀಡುತ್ತಾರೆ; ಅಥವಾ ವಚನಗಳನ್ನೇ ತಿದ್ದಿ ಬದಲಾಯಿಸುತ್ತಾರೆ.