Skip to content
الزُّخرُف /

ಆಯತ್ 58

43 : 58

ಆಯತ್ 58 of الزُّخرُف (43 : 58). This page carries the verse in the Uthmani script with a translation of its meaning, at a stable URL that can be cited on its own.

الزُّخرُف ಆಯತ್‌ಗಳು 89
ಸೂರ · الزُّخرُف
ಕನ್ನಡ · Hamza
43 : 58

وَقَالُوٓاْ ءَأَٰلِهَتُنَا خَيۡرٌ أَمۡ هُوَۚ مَا ضَرَبُوهُ لَكَ إِلَّا جَدَلَۢاۚ بَلۡ هُمۡ قَوۡمٌ خَصِمُونَ

ಅವರು ಕೇಳಿದರು: “ನಮ್ಮ ದೇವರುಗಳು ಶ್ರೇಷ್ಠರೋ ಅಥವಾ ಅವನೋ?” ಅವರು ಕೇವಲ ತರ್ಕಕ್ಕಾಗಿ ನಿಮ್ಮ ಮುಂದೆ ಅದನ್ನು ಹೇಳಿದ್ದರು. ವಾಸ್ತವವಾಗಿ, ಅವರು ಜಗಳಗಂಟಿ ಜನರಾಗಿದ್ದಾರೆ.

Explanation & meanings · 1
  1. “ನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ.” [21:98] ಎಂಬ ವಚನವು ಅವತೀರ್ಣವಾದಾಗ, ಈ ವಚನದ ಪ್ರಕಾರ ಕ್ರೈಸ್ತರು ಆರಾಧಿಸುತ್ತಿರುವ ಪ್ರವಾದಿ ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ಕೂಡ ನರಕದ ಇಂಧನವಾಗುತ್ತಾರೆಂದು ಅವರು ವಾದಿಸಿದರು. ಪ್ರವಾದಿಗಳು, ಮಹಾಪುರುಷರು ಮತ್ತು ದೇವದೂತರುಗಳನ್ನು ಜನರು ಆರಾಧಿಸುತ್ತಾರೆ ಎಂಬುದು ನಿಜ. ಆದರೆ ಅವರು ತಮ್ಮನ್ನು ಆರಾಧಿಸಬೇಕೆಂದು ಹೇಳಿಲ್ಲ ಮತ್ತು ಆ ಆರಾಧನೆಯ ಬಗ್ಗೆ ಅವರು ಸಂಪ್ರೀತರೂ ಅಲ್ಲ. ಆದ್ದರಿಂದ ಅವರು ನರಕಕ್ಕೆ ಇಂಧನವಾಗುವುದಿಲ್ಲ.