Skip to content
فُصِّلَت /

ಆಯತ್ 40

41 : 40

ಆಯತ್ 40 of فُصِّلَت (41 : 40). This page carries the verse in the Uthmani script with a translation of its meaning, at a stable URL that can be cited on its own.

فُصِّلَت ಆಯತ್‌ಗಳು 54
ಸೂರ · فُصِّلَت
ಕನ್ನಡ · Hamza
41 : 40

إِنَّ ٱلَّذِينَ يُلۡحِدُونَ فِيٓ ءَايَٰتِنَا لَا يَخۡفَوۡنَ عَلَيۡنَآۗ أَفَمَن يُلۡقَىٰ فِي ٱلنَّارِ خَيۡرٌ أَم مَّن يَأۡتِيٓ ءَامِنٗا يَوۡمَ ٱلۡقِيَٰمَةِۚ ٱعۡمَلُواْ مَا شِئۡتُمۡ إِنَّهُۥ بِمَا تَعۡمَلُونَ بَصِيرٌ

ನಿಶ್ಚಯವಾಗಿಯೂ ನಮ್ಮ ದೃಷ್ಟಾಂತಗಳಲ್ಲಿ ವಿಚಲತೆಯನ್ನು ಉಂಟುಮಾಡುವವರು ಯಾರೋ ಅವರು ನಮ್ಮಿಂದ (ಸ್ವಲ್ಪವೂ) ಮರೆಯಾಗಿಲ್ಲ. ಹಾಗಾದರೆ ನರಕಕ್ಕೆ ಹಾಕಲಾಗುವವನು ಶ್ರೇಷ್ಠನೋ? ಅಥವಾ ಪುನರುತ್ಥಾನ ದಿನದಂದು ನಿರ್ಭಯವಾಗಿ ಬರುವವನೋ? ನೀವು ಬಯಸುವುದನ್ನು ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅವನು ವೀಕ್ಷಿಸುತ್ತಿದ್ದಾನೆ.

Explanation & meanings · 1
  1. ಅಂದರೆ ಕುರ್‌ಆನ್ ದೇವವಾಣಿಯೆಂದು ಒಪ್ಪಿಕೊಂಡ ಬಳಿಕವೂ ಅದರಿಂದ ವಿಮುಖರಾಗುವವರು ಮತ್ತು ಅದನ್ನು ನಿಷೇಧಿಸುವವರು. ತಮ್ಮ ವಿಚಾರಗಳನ್ನು ಮತ್ತು ತತ್ವ-ಸಿದ್ಧಾಂತಗಳನ್ನು ಸಮರ್ಥಿಸುವುದಕ್ಕಾಗಿ ಕುರ್‌ಆನ್ ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸುವವರು ಕೂಡ ಇದರಲ್ಲಿ ಒಳಪಡುತ್ತಾರೆ.