Skip to content
النِّسَاء /

ಆಯತ್ 3

4 : 3

ಆಯತ್ 3 of النِّسَاء (4 : 3). This page carries the verse in the Uthmani script with a translation of its meaning, at a stable URL that can be cited on its own.

النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 3

وَإِنۡ خِفۡتُمۡ أَلَّا تُقۡسِطُواْ فِي ٱلۡيَتَٰمَىٰ فَٱنكِحُواْ مَا طَابَ لَكُم مِّنَ ٱلنِّسَآءِ مَثۡنَىٰ وَثُلَٰثَ وَرُبَٰعَۖ فَإِنۡ خِفۡتُمۡ أَلَّا تَعۡدِلُواْ فَوَٰحِدَةً أَوۡ مَا مَلَكَتۡ أَيۡمَٰنُكُمۡۚ ذَٰلِكَ أَدۡنَىٰٓ أَلَّا تَعُولُواْ

ಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂದು ನೀವು ಭಯಪಡುವುದಾದರೆ, ಇತರ ಮಹಿಳೆಯರಲ್ಲಿ ನಿಮಗೆ ಇಷ್ಟವಾದ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಆದರೆ (ಅವರ ನಡುವೆ) ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂಬ ಭಯವಿದ್ದರೆ, ಒಬ್ಬಳನ್ನೇ ವಿವಾಹವಾಗಿರಿ. ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯನ್ನು ವಿವಾಹವಾಗಿರಿ. ನೀವು (ಅನ್ಯಾಯದ ಕಡೆಗೆ) ವಾಲದಿರಲು ಇದು ಅತ್ಯಂತ ಸೂಕ್ತವಾಗಿದೆ.

Explanation & meanings · 2
  1. ಇಸ್ಲಾಮೀ ಪೂರ್ವ ಕಾಲದಲ್ಲಿ ಅನಾಥ ಹೆಣ್ಣುಮಕ್ಕಳ ಪೋಷಣೆಯ ಹೊಣೆಯನ್ನು ವಹಿಸಿಕೊಂಡವರು ಅವರ ಆಸ್ತಿ ಮತ್ತು ಸೌಂದರ್ಯದ ಮೇಲೆ ಕಣ್ಣಿಟ್ಟು ಅವರನ್ನು ವಿವಾಹವಾಗುತ್ತಿದ್ದರು. ಆದರೆ ಅವರಿಗೆ ವಧುದಕ್ಷಿಣೆ ನೀಡುತ್ತಿರಲಿಲ್ಲ ಮತ್ತು ಅವರೊಡನೆ ನ್ಯಾಯದಿಂದ ವರ್ತಿಸುತ್ತಿರಲಿಲ್ಲ. ಹೀಗೆ ಅವರೊಡನೆ ನ್ಯಾಯದಿಂದ ವರ್ತಿಸಲು ಸಾಧ್ಯವಾಗದು ಎಂದು ಭಯಪಡುವವರು ಅವರನ್ನು ವಿವಾಹವಾಗಬಾರದು.
  2. ಏಕಕಾಲದಲ್ಲಿ ನಾಲ್ಕು ಪತ್ನಿಯರನ್ನು ಹೊಂದುವ ಅನುಮತಿಯಿದೆ. ಆದರೆ ಅವರ ನಡುವೆ ನ್ಯಾಯಯುತವಾಗಿ ವರ್ತಿಸಬೇಕು. ಅದು ಸಾಧ್ಯವಾಗದೆಂಬ ಭಯವಿದ್ದರೆ ಒಬ್ಬಳನ್ನು ಮಾತ್ರ ವಿವಾಹವಾಗಬೇಕು.