Skip to content
آل عِمران /

ಆಯತ್ 78

3 : 78

ಆಯತ್ 78 of آل عِمران (3 : 78). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 78

وَإِنَّ مِنۡهُمۡ لَفَرِيقٗا يَلۡوُۥنَ أَلۡسِنَتَهُم بِٱلۡكِتَٰبِ لِتَحۡسَبُوهُ مِنَ ٱلۡكِتَٰبِ وَمَا هُوَ مِنَ ٱلۡكِتَٰبِ وَيَقُولُونَ هُوَ مِنۡ عِندِ ٱللَّهِ وَمَا هُوَ مِنۡ عِندِ ٱللَّهِۖ وَيَقُولُونَ عَلَى ٱللَّهِ ٱلۡكَذِبَ وَهُمۡ يَعۡلَمُونَ

ನಿಶ್ಚಯವಾಗಿಯೂ ಅವರಲ್ಲೊಂದು ಪಂಗಡವು ಗ್ರಂಥವನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚುತ್ತಾರೆ. ಅದು ಗ್ರಂಥದ ಭಾಗವೆಂದು ನೀವು ಭಾವಿಸುವುದಕ್ಕಾಗಿ. ಆದರೆ ಅದು ಗ್ರಂಥದ ಭಾಗವಲ್ಲ. ಅವರು ಹೇಳುತ್ತಾರೆ: “ಅದು ಅಲ್ಲಾಹನ ಕಡೆಯಿಂದ ಬಂದಿದೆ.” ಆದರೆ ಅದು ಅಲ್ಲಾಹನ ಕಡೆಯಿಂದ ಬಂದಿಲ್ಲ. ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.

Explanation & meanings · 1
  1. ಯಹೂದಿಗಳು ಅವರ ಧರ್ಮಗ್ರಂಥವನ್ನು ತಿದ್ದುಪಡಿ ಮಾಡಿದ್ದು ಮಾತ್ರವಲ್ಲದೆ, ಜನಸಾಮಾನ್ಯರ ಮುಂದೆ ಅದನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚಿ ಜನರು ಬೇರೆ ಅರ್ಥವನ್ನು ಭಾವಿಸುವಂತೆ ಮಾಡುತ್ತಿದ್ದರು. ಅದೇ ರೀತಿ ಅವರು ತಮ್ಮ ಕೆಲವು ಮಾತುಗಳನ್ನು ಅಲ್ಲಾಹನ ವಚನಗಳೆಂದು ಸುಳ್ಳು ಹೇಳುತ್ತಿದ್ದರು.