Skip to content
مَريَم /

ಆಯತ್ 96

19 : 96
مَريَم ಆಯತ್‌ಗಳು 98
ಸೂರ · مَريَم
ಕನ್ನಡ · Hamza
19 : 96

إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ سَيَجۡعَلُ لَهُمُ ٱلرَّحۡمَٰنُ وُدّٗا

ನಿಶ್ಚಯವಾಗಿಯೂ, ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಪರಮ ದಯಾಮಯನು (ಅಲ್ಲಾಹು) ಪ್ರೀತಿಯನ್ನು ಉಂಟುಮಾಡುವನು.

Explanation & meanings · 1
  1. ಅಂದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗುವವರ ಹೃದಯದಲ್ಲಿ ಅಲ್ಲಾಹು ಅವನ ಬಗ್ಗೆ ಪ್ರೀತಿಯುಂಟಾಗುವಂತೆ ಮಾಡುವನು. ಅಲ್ಲಾಹನನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಅಲ್ಲಾಹು ಪ್ರೀತಿಸುವನು. ಅಲ್ಲಾಹು ಯಾರನ್ನಾದರೂ ಪ್ರೀತಿಸಿದರೆ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಕರೆದು ಹೇಳುವನು: “ನಾನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸಿದ್ದೇನೆ. ನೀನು ಕೂಡ ಅವನನ್ನು ಪ್ರೀತಿಸು.” ಆಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಕೂಡ ಅವನನ್ನು ಪ್ರೀತಿಸುವರು. ನಂತರ ಅವರು ಆಕಾಶಲೋಕದಲ್ಲಿರುವ ಎಲ್ಲಾ ದೇವದೂತರುಗಳನ್ನು ಕರೆದು ಹೇಳವರು: “ಅಲ್ಲಾಹು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸಿದ್ದಾನೆ. ಆದ್ದರಿಂದ ನೀವು ಕೂಡ ಅವನನ್ನು ಪ್ರೀತಿಸಿರಿ.” ಆಗ ಆಕಾಶಲೋಕದಲ್ಲಿರುವವರೆಲ್ಲರೂ ಅವನನ್ನು ಪ್ರೀತಿಸುವರು. ಆಕಾಶಲೋಕದಲ್ಲಿರುವವರ ಪ್ರೀತಿ ಲಭ್ಯವಾಗುವುದರೊಂದಿಗೆ ಆ ವ್ಯಕ್ತಿಗೆ ಭೂಮಿಯಲ್ಲಿ ಅಂಗೀಕಾರ ಮತ್ತು ಶ್ಲಾಘನೆಯು ಲಭ್ಯವಾಗುವುದು.