Skip to content
مَريَم /

ಆಯತ್ 71

19 : 71

ಆಯತ್ 71 of مَريَم (19 : 71). This page carries the verse in the Uthmani script with a translation of its meaning, at a stable URL that can be cited on its own.

مَريَم ಆಯತ್‌ಗಳು 98
ಸೂರ · مَريَم
ಕನ್ನಡ · Hamza
19 : 71

وَإِن مِّنكُمۡ إِلَّا وَارِدُهَاۚ كَانَ عَلَىٰ رَبِّكَ حَتۡمٗا مَّقۡضِيّٗا

ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ (ನರಕದ) ಬಳಿಗೆ ಬರುವರು. ಅದು ತಮ್ಮ ಪರಿಪಾಲಕನ (ಅಲ್ಲಾಹನ) ಖಚಿತ ಹಾಗೂ ಬದಲಾವಣೆಯಿಲ್ಲದ ತೀರ್ಮಾನವಾಗಿದೆ.

Explanation & meanings · 1
  1. ನರಕದ ಮೇಲ್ಭಾಗದಲ್ಲಿ ಒಂದು ಸೇತುವೆಯನ್ನು ನಿರ್ಮಿಸಲಾಗುವುದು. ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳೆಲ್ಲರೂ ಆ ಸೇತುವೆಯನ್ನು ದಾಟಲು ಪ್ರಯತ್ನಿಸುವರು. ಸತ್ಯವಿಶ್ವಾಸಿಗಳು ತಮ್ಮ ತಮ್ಮ ಕರ್ಮಗಳಿಗೆ ಅನುಗುಣವಾಗಿ ಆ ಸೇತುವೆಯನ್ನು ದಾಟುವರು. ಕೆಲವರು ಕಣ್ಣೆವೆಯಿಕ್ಕುವ ವೇಗದಲ್ಲಿ, ಕೆಲವರು ಮಿಂಚಿನ ವೇಗದಲ್ಲಿ, ಕೆಲವರು ಹಕ್ಕಿ ಹಾರುವ ವೇಗದಲ್ಲಿ, ಕೆಲವರು ಕುದುರೆಗಳ ವೇಗದಲ್ಲಿ ದಾಟುವರು. ದುಷ್ಕರ್ಮಿಗಳಾದ ಸತ್ಯವಿಶ್ವಾಸಿಗಳು ದಾಟಲು ಸಾಧ್ಯವಾಗದೆ ನರಕದಲ್ಲಿ ಬೀಳುವರು. ಅವರನ್ನು ನಂತರ ಶಿಫಾರಸು ಮಾಡುವ ಮೂಲಕ ಅಥವಾ ಅವರ ಶಿಕ್ಷೆ ಮುಗಿದ ಬಳಿಕ ನರಕದಿಂದ ಪಾರು ಮಾಡಲಾಗುವುದು. ಆದರೆ ಸತ್ಯನಿಷೇಧಿಗಳಿಗೆ ಆ ಸೇತುವೆಯನ್ನು ದಾಟಲು ಸಾಧ್ಯವಾಗದೆ ಎಲ್ಲರೂ ನರಕದಲ್ಲಿ ಬೀಳುವರು. ಅದರಲ್ಲೇ ಶಾಶ್ವತವಾಗಿ ವಾಸಿಸುವರು.