18 : 24
إِلَّآ أَن يَشَآءَ ٱللَّهُۚ وَٱذۡكُر رَّبَّكَ إِذَا نَسِيتَ وَقُلۡ عَسَىٰٓ أَن يَهۡدِيَنِ رَبِّي لِأَقۡرَبَ مِنۡ هَٰذَا رَشَدٗا
“ಇನ್ ಶಾ ಅಲ್ಲಾಹ್” (ಅಲ್ಲಾಹು ಇಚ್ಛಿಸಿದರೆ ಮಾಡುತ್ತೇನೆ) ಎಂದು ಅದಕ್ಕೆ ಸೇರಿಸದೆ. ನಿಮಗೆ ಅದನ್ನು ಸೇರಿಸಲು ಮರೆತುಹೋದರೆ ನೆನಪಾದಾಗ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. “ಸನ್ಮಾರ್ಗಕ್ಕೆ ಇದಕ್ಕಿಂತಲೂ ಹೆಚ್ಚು ಹತ್ತಿರವಾಗಿರುವ ಮಾತಿಗೆ ನನ್ನ ಪರಿಪಾಲಕನು (ಅಲ್ಲಾಹು) ನನ್ನನ್ನು ಮುನ್ನಡೆಸುವನೆಂದು ನನಗೆ ಸಂಪೂರ್ಣ ಭರವಸೆಯಿದೆ” ಎಂದು ಹೇಳಿರಿ.
Explanation & meanings · 1
- ಒಮ್ಮೆ ಯಹೂದಿಗಳು ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಮೂರು ಪ್ರಶ್ನೆಗಳನ್ನು ಕೇಳಿದರು. ಆತ್ಮದ ನಿಜಸ್ಥಿತಿಯ ಬಗ್ಗೆ, ಗುಹಾವಾಸಿಗಳ ಬಗ್ಗೆ ಮತ್ತು ದುಲ್-ಕರ್ನೈನ್ ಬಗ್ಗೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇವವಾಣಿಯ ಮೂಲಕ ಉತ್ತರ ಬರಬಹುದೆಂಬ ನಿರೀಕ್ಷೆಯಿಂದ ನಾಳೆ ಹೇಳುತ್ತೇನೆ ಎಂದರು. ಆದರೆ 15 ದಿನಗಳ ತನಕ ಉತ್ತರ ಬರಲಿಲ್ಲ. ಕೊನೆಗೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಈ ಅಧ್ಯಾಯದೊಂದಿಗೆ ಬಂದರು. ಭವಿಷ್ಯದಲ್ಲಿ ಮಾಡುವ ಯಾವುದೇ ವಿಷಯದ ಬಗ್ಗೆ ಹೇಳುವಾಗ ಇನ್ ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ ಮಾಡುತ್ತೇನೆ) ಎಂಬ ಮಾತನ್ನು ಸೇರಿಸಬೇಕೆಂದು ಇಲ್ಲಿ ಆಜ್ಞಾಪಿಸಲಾಗಿದೆ. ಹೇಳಲು ಮರೆತರೆ ನೆನಪಾದಾಗ ಹೇಳಬೇಕು.