Skip to content
الإسرَاء /

ಆಯತ್ 60

17 : 60

ಆಯತ್ 60 of الإسرَاء (17 : 60). This page carries the verse in the Uthmani script with a translation of its meaning, at a stable URL that can be cited on its own.

الإسرَاء ಆಯತ್‌ಗಳು 111
ಸೂರ · الإسرَاء
ಕನ್ನಡ · Hamza
17 : 60

وَإِذۡ قُلۡنَا لَكَ إِنَّ رَبَّكَ أَحَاطَ بِٱلنَّاسِۚ وَمَا جَعَلۡنَا ٱلرُّءۡيَا ٱلَّتِيٓ أَرَيۡنَٰكَ إِلَّا فِتۡنَةٗ لِّلنَّاسِ وَٱلشَّجَرَةَ ٱلۡمَلۡعُونَةَ فِي ٱلۡقُرۡءَانِۚ وَنُخَوِّفُهُمۡ فَمَا يَزِيدُهُمۡ إِلَّا طُغۡيَٰنٗا كَبِيرٗا

“ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಜನರನ್ನು ಆವರಿಸಿದ್ದಾನೆ” ಎಂದು ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ). ನಾವು ನಿಮಗೆ ತೋರಿಸಿದ ಆ ದೃಶ್ಯವನ್ನು ನಾವು ಜನರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿದ್ದೆವು. ಅದೇ ರೀತಿ ಕುರ್‌ಆನ್‍ನಲ್ಲಿ ಶಪಿಸಲಾದ ಆ ಮರವನ್ನು ಕೂಡ. ನಾವು ಅವರನ್ನು ಹೆದರಿಸುತ್ತೇವೆ. ಆದರೆ ಅದು ಅವರಿಗೆ ಮಹಾ ಅತಿರೇಕವನ್ನು ಮಾತ್ರ ಹೆಚ್ಚಿಸುತ್ತದೆ.

Explanation & meanings · 1
  1. ಪ್ರವಾದಿ ಮುಹಮ್ಮದರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಾಶಾರೋಹಣ ಮಾಡಿದಾಗ ಅಲ್ಲಿ ನರಕವನ್ನು ಮತ್ತು ಅದರ ಶಿಕ್ಷೆಗಳನ್ನು ನೋಡಿದರು. ಅದನ್ನು ಅವರಿಗೆ ಜನರಿಗೆ ವಿವರಿಸಿದಾಗ ಸತ್ಯನಿಷೇಧಿಗಳು ತೀವ್ರವಾಗಿ ಲೇವಡಿ ಮಾಡಿದರು. ನರಕದಲ್ಲಿರುವ ಝಕ್ಕೂಮ್ ಮರದ ಬಗ್ಗೆ ಹೇಳಿದಾಗಲೂ ವಿರೋಧಿಗಳು ತೀವ್ರವಾಗಿ ಹಾಸ್ಯ ಮಾಡಿದರು.