Skip to content
الإسرَاء /

ಆಯತ್ 28

17 : 28

ಆಯತ್ 28 of الإسرَاء (17 : 28). This page carries the verse in the Uthmani script with a translation of its meaning, at a stable URL that can be cited on its own.

الإسرَاء ಆಯತ್‌ಗಳು 111
ಸೂರ · الإسرَاء
ಕನ್ನಡ · Hamza
17 : 28

وَإِمَّا تُعۡرِضَنَّ عَنۡهُمُ ٱبۡتِغَآءَ رَحۡمَةٖ مِّن رَّبِّكَ تَرۡجُوهَا فَقُل لَّهُمۡ قَوۡلٗا مَّيۡسُورٗا

ನೀವು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿರೀಕ್ಷಿಸುವ ದಯೆಯನ್ನು ಕಾಯುತ್ತಿರುವ ಕಾರಣ, ಅವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅವರೊಡನೆ ಬಹಳ ಮೃದುವಾಗಿ ಮಾತನಾಡುತ್ತಾ ಅದನ್ನು ಮನವರಿಕೆ ಮಾಡಿಕೊಡಿ.

Explanation & meanings · 1
  1. ಅಂದರೆ ನೀವು ಆರ್ಥಿಕವಾಗಿ ದುರ್ಬಲರಾಗಿರುವ ಸಂದರ್ಭದಲ್ಲಿ—ಇಂತಹ ಸಂದರ್ಭಗಳಲ್ಲಿ ಎಲ್ಲರೂ ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ—ಆಗ ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಸಂಬಂಧಿಕರು, ಬಡವರು ಮುಂತಾದವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅಂದರೆ ಅವರಿಗೆ ನಿಮ್ಮ ಅಸಹಾಯಕತೆಯನ್ನು ತಿಳಿಸಬೇಕಾಗಿ ಬಂದರೆ, ಗಟ್ಟಿ ಸ್ವರದಲ್ಲಿ ಗದರಿಸುವ ರೀತಿಯಲ್ಲಿ ವರ್ತಿಸಬೇಡಿ. ಬದಲಿಗೆ, ಮೃದುವಾಗಿ ಮತ್ತು ಸೌಮ್ಯವಾಗಿ ಅವರಿಗೆ ನಿಮ್ಮ ಪರಿಸ್ಥಿತಿಯನ್ನು ತಿಳಿಸಿಕೊಡಿ.