Skip to content
يُوسُف /

ಆಯತ್ 67

12 : 67

ಆಯತ್ 67 of يُوسُف (12 : 67). This page carries the verse in the Uthmani script with a translation of its meaning, at a stable URL that can be cited on its own.

يُوسُف ಆಯತ್‌ಗಳು 111
ಸೂರ · يُوسُف
ಕನ್ನಡ · Hamza
12 : 67

وَقَالَ يَٰبَنِيَّ لَا تَدۡخُلُواْ مِنۢ بَابٖ وَٰحِدٖ وَٱدۡخُلُواْ مِنۡ أَبۡوَٰبٖ مُّتَفَرِّقَةٖۖ وَمَآ أُغۡنِي عَنكُم مِّنَ ٱللَّهِ مِن شَيۡءٍۖ إِنِ ٱلۡحُكۡمُ إِلَّا لِلَّهِۖ عَلَيۡهِ تَوَكَّلۡتُۖ وَعَلَيۡهِ فَلۡيَتَوَكَّلِ ٱلۡمُتَوَكِّلُونَ

ತಂದೆ ಹೇಳಿದರು: “ನನ್ನ ಪ್ರೀತಿಯ ಮಕ್ಕಳೇ! ನೀವು ಒಂದೇ ಬಾಗಿಲಿನಿಂದ ಪ್ರವೇಶ ಮಾಡಬೇಡಿ. ಬದಲಿಗೆ, ಬೇರೆ ಬೇರೆ ಬಾಗಿಲುಗಳಿಂದ ಪ್ರವೇಶ ಮಾಡಿರಿ. ಅಲ್ಲಾಹನ ಕಡೆಯಿಂದ ಬರುವ ಏನನ್ನೂ ನಿಮ್ಮಿಂದ ತಡೆಗಟ್ಟಲು ನನಗೆ ಸಾಧ್ಯವಿಲ್ಲ. ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ಭರವಸೆಯಿಡುವವರು ಅವನಲ್ಲಿಯೇ ಭರವಸೆಯಿಡಲಿ.”

Explanation & meanings · 1
  1. ಸ್ಫುರದ್ರೂಪಿಗಳು ಮತ್ತು ಉತ್ತಮ ದೇಹದಾರ್ಢ್ಯವನ್ನು ಹೊಂದಿರುವ ತನ್ನ ಹನ್ನೊಂದು ಮಕ್ಕಳು ಒಟ್ಟೊಟ್ಟಿಗೆ ಪ್ರವೇಶ ಮಾಡುವಾಗ ಜನರು ಅವರನ್ನು ಕಂಡು ಬೆರಗಾಗುವರು ಮತ್ತು ಅಸೂಯೆಪಡುವರು. ಇದರಿಂದ ಅವರಿಗೆ ದೃಷ್ಟಿ ತಾಗುವ ಸಾಧ್ಯತೆಯಿದೆ. ಜನರ ದೃಷ್ಟಿಯಿಂದ ಅವರನ್ನು ಕಾಪಾಡಲು ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ಈ ಉಪಾಯವನ್ನು ಹೇಳಿದ್ದರು. ಆದರೆ ಇದರ ಹೊರತಾಗಿಯೂ ದೃಷ್ಟಿ ತಾಗಬೇಕೆಂದು ಅಲ್ಲಾಹನ ವಿಧಿಸಿದ್ದರೆ ಅದನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲ. ಇದು ಕೇವಲ ಒಂದು ಮುಂಜಾಗೃತಾ ಕ್ರಮ ಮಾತ್ರವಾಗಿದೆ.