Skip to content
يُوسُف /

ಆಯತ್ 106

12 : 106

ಆಯತ್ 106 of يُوسُف (12 : 106). This page carries the verse in the Uthmani script with a translation of its meaning, at a stable URL that can be cited on its own.

يُوسُف ಆಯತ್‌ಗಳು 111
ಸೂರ · يُوسُف
ಕನ್ನಡ · Hamza
12 : 106

وَمَا يُؤۡمِنُ أَكۡثَرُهُم بِٱللَّهِ إِلَّا وَهُم مُّشۡرِكُونَ

ಅವರಲ್ಲಿ ಹೆಚ್ಚಿನವರು ಅಲ್ಲಾಹನಲ್ಲಿ ವಿಶ್ವಾಸವಿರುವವರಾಗಿದ್ದೂ ಸಹ (ಆರಾಧನೆಯಲ್ಲಿ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.

Explanation & meanings · 1
  1. ಅಂದರೆ ಬಹುದೇವವಿಶ್ವಾಸಿಗಳಲ್ಲಿ ಹೆಚ್ಚಿನವರು ಅಲ್ಲಾಹನ ಪ್ರಭುತ್ವದಲ್ಲಿ (ರುಬೂಬಿಯತ್) ವಿಶ್ವಾಸವಿಡುತ್ತಾರೆ. ಅಂದರೆ ಸೃಷ್ಟಿಕರ್ತ, ಪರಿಪಾಲಕ, ನಿಯಂತ್ರಕ, ಅನ್ನದಾತ, ಜೀವ ಮತ್ತು ಮರಣ ನೀಡುವವನು ಮುಂತಾದ ಎಲ್ಲವೂ ಅಲ್ಲಾಹನೆಂದು ಅವರು ವಿಶ್ವಾಸವಿಡುತ್ತಾರೆ. ಇದರಲ್ಲಿ ಅಲ್ಲಾಹನಿಗೆ ಯಾವುದೇ ಸಹಭಾಗಿಗಳು ಅಥವಾ ಪಾಲುದಾರರು ಇಲ್ಲವೆಂದು ಅವರು ದೃಢವಾಗಿ ವಿಶ್ವಾಸವಿಡುತ್ತಾರೆ. ಆದರೆ ಆರಾಧನೆಯ ವಿಷಯದಲ್ಲಿ ಅವರು ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುತ್ತಾರೆ.