Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 3 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ಹದೀಸ್‌ನ ದರ್ಜೆ

"ಮೂರು (ವರ್ಗದ) ಜನರೊಂದಿಗೆ ಅಲ್ಲಾಹು ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ, ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ: (ಅವರು ಯಾರೆಂದರೆ) ವೃದ್ಧ ವ್ಯಭಿಚಾರಿ, ಅಹಂಕಾರಿ ಬಡವ, ಮತ್ತು ಅಲ್ಲಾಹನನ್ನು ತನ್ನ ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡ ವ್ಯಕ್ತಿ. ಅವನು ಆಣೆಯಿಡದೆ ಮಾರಾಟ ಮಾಡುವುದಿಲ್ಲ ಮತ್ತು ಆಣೆಯಿಡದೆ ಖರೀದಿಸುವುದಿಲ್ಲ".
ಸಹೀಹ್ ಇದನ್ನು ತಬರಾನಿ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ."
ಸಹೀಹ್ ಇದನ್ನು ಹಾಕಿಂ ಮತ್ತು ತಬರಾನಿ ವರದಿ ಮಾಡಿದ್ದಾರೆ.
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಚಿಕ್ಕ ಮತ್ತು ದೊಡ್ಡ ಯಾವುದೇ ಪಾಪಗಳನ್ನು ಮಾಡದೆ ಬಿಟ್ಟಿಲ್ಲ." ಅವರು ಕೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆ ವ್ಯಕ್ತಿ ಹೌದು ಎಂದು ಉತ್ತರಿಸಿದರು. ಅವರು ಹೇಳಿದರು: "ನಿಶ್ಚಯವಾಗಿಯೂ ಇದು ಅದರ ಮೇಲೆ ಬರುತ್ತದೆ."
ಸಹೀಹ್ ಇದನ್ನು ಅಬೂ ಯಅಲಾ, ತಬರಾನಿ ಮತ್ತು ದಿಯಾ ಅಲ್-ಮಕ್ದಿಸಿ ವರದಿ ಮಾಡಿದ್ದಾರೆ.