Skip to content
ಅಲ್ -ಜುಮುಅ /

ಆಯತ್ 11

62 : 11

ಆಯತ್ 11 of ಅಲ್ -ಜುಮುಅ (62 : 11). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಜುಮುಅ ಆಯತ್‌ಗಳು 11
62 : 11

وَإِذَا رَأَوۡاْ تِجَٰرَةً أَوۡ لَهۡوًا ٱنفَضُّوٓاْ إِلَيۡهَا وَتَرَكُوكَ قَآئِمٗاۚ قُلۡ مَا عِندَ ٱللَّهِ خَيۡرٞ مِّنَ ٱللَّهۡوِ وَمِنَ ٱلتِّجَٰرَةِۚ وَٱللَّهُ خَيۡرُ ٱلرَّٰزِقِينَ

ಅವರು ವ್ಯಾಪಾರದ ಸರಕು ಮಾರಾಟವಾಗುವುದನ್ನು ಕಂಡರೆ ಅಥವಾ ಮನೋರಂಜನೆಯನ್ನು ಕಂಡರೆ ಅದರ ಕಡೆಗೆ ಓಡುತ್ತಾರೆ ಮತ್ತು ನಿಮ್ಮನ್ನು ನಿಂತ ಸ್ಥಿತಿಯಲ್ಲೇ ಬಿಟ್ಟುಬಿಡುತ್ತಾರೆ. ಹೇಳಿರಿ: “ಅಲ್ಲಾಹನ ಬಳಿ ಏನಿದೆಯೋ ಅದು ವ್ಯಾಪಾರ ಮತ್ತು ಮನೋರಂಜನೆಗಿಂತಲೂ ಶ್ರೇಷ್ಠವಾಗಿದೆ. ಅಲ್ಲಾಹು ಉಪಜೀವನ ನೀಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.”

Explanation & meanings · 1
  1. ಒಮ್ಮೆ ಒಂದು ಶುಕ್ರವಾರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖುತ್ಬಾ (ಪ್ರವಚನ) ನಿರ್ವಹಿಸುತ್ತಿದ್ದಾಗ ವ್ಯಾಪಾರ ತಂಡವು ಮದೀನ ಮಾರುಕಟ್ಟೆಗೆ ಆಗಮಿಸಿತು. ಸದ್ದುಗದ್ದಲ ಕೇಳಿ ಮಸೀದಿಯಲ್ಲಿದ್ದ ಜನರೆಲ್ಲರೂ ಸರಕು ಖರೀದಿಸಲು ಮಾರುಕಟ್ಟೆಗೆ ಓಡಿದರು. ಕೇವಲ 12 ಮಂದಿ ಮಾತ್ರ ಮಸೀದಿಯಲ್ಲಿ ಉಳಿದರು. ಇದರ ಬಗ್ಗೆ ಈ ವಚನವು ಅವತೀರ್ಣವಾಯಿತು.