Skip to content
الأنعَام /

ಆಯತ್ 9

6 : 9

ಆಯತ್ 9 of الأنعَام (6 : 9). This page carries the verse in the Uthmani script with a translation of its meaning, at a stable URL that can be cited on its own.

الأنعَام ಆಯತ್‌ಗಳು 165
ಸೂರ · الأنعَام
ಕನ್ನಡ · Hamza
6 : 9

وَلَوۡ جَعَلۡنَٰهُ مَلَكٗا لَّجَعَلۡنَٰهُ رَجُلٗا وَلَلَبَسۡنَا عَلَيۡهِم مَّا يَلۡبِسُونَ

ನಾವು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೂ ಸಹ ಅವರನ್ನು ಮನುಷ್ಯನಾಗಿ ಮಾಡಿಯೇ ಕಳುಹಿಸುತ್ತಿದ್ದೆವು. ಅವರು ಈಗ ಏನು ಗೊಂದಲ ಮಾಡುತ್ತಿದ್ದಾರೋ ಅದೇ ಗೊಂದಲವನ್ನು ಅವರು ಆಗಲೂ ಮಾಡುತ್ತಿದ್ದರು.

Explanation & meanings · 1
  1. ಅಲ್ಲಾಹು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದು ಸಾಧ್ಯವಿಲ್ಲ. ಏಕೆಂದರೆ ದೇವದೂತರನ್ನು ಕಳುಹಿಸಿದರೆ ಜನರು ಹೇಳುತ್ತಿದ್ದರು: “ನೀನೇಕೆ ದೇವದೂತರನ್ನು ಪ್ರವಾದಿಯಾಗಿ ಕಳುಹಿಸಿದೆ? ನೀನು ಮನುಷ್ಯನನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೆ ನಾವು ಆ ಪ್ರವಾದಿಯನ್ನು ಅನುಸರಿಸುತ್ತಿದ್ದೆವು. ನಾವು ದೇವದೂತರನ್ನು ಅನುಸರಿಸುವುದು ಹೇಗೆ ಸಾಧ್ಯ? ಅವರಿಗೂ ನಮಗೂ ಅಗಾಧ ವ್ಯತ್ಯಾಸವಿದೆ.” ಇನ್ನು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದಾದರೂ ಅವರನ್ನು ಮನುಷ್ಯ ರೂಪದಲ್ಲೇ ಕಳುಹಿಸಬೇಕಾಗುತ್ತದೆ. ಆದರೆ ಆಗಲೂ ಅವರು ಈಗ ಹೇಳುತ್ತಿರುವ ಅದೇ ಕಾರಣವನ್ನು ಹೇಳಿ ಅನುಸರಿಸಲು ನಿರಾಕರಿಸುತ್ತಿದ್ದರು.