Skip to content
الأنعَام /

ಆಯತ್ 81

6 : 81

ಆಯತ್ 81 of الأنعَام (6 : 81). This page carries the verse in the Uthmani script with a translation of its meaning, at a stable URL that can be cited on its own.

الأنعَام ಆಯತ್‌ಗಳು 165
ಸೂರ · الأنعَام
ಕನ್ನಡ · Hamza
6 : 81

وَكَيۡفَ أَخَافُ مَآ أَشۡرَكۡتُمۡ وَلَا تَخَافُونَ أَنَّكُمۡ أَشۡرَكۡتُم بِٱللَّهِ مَا لَمۡ يُنَزِّلۡ بِهِۦ عَلَيۡكُمۡ سُلۡطَٰنٗاۚ فَأَيُّ ٱلۡفَرِيقَيۡنِ أَحَقُّ بِٱلۡأَمۡنِۖ إِن كُنتُمۡ تَعۡلَمُونَ

ನೀವು (ಅಲ್ಲಾಹನೊಡನೆ) ಸಹಭಾಗಿಯಾಗಿ ಮಾಡಿದವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಅವತೀರ್ಣಗೊಳಿಸದ ವಸ್ತುಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಲು ನೀವು (ಸ್ವಲ್ಪವೂ) ಭಯಪಡುವುದಿಲ್ಲ. ಹೀಗಿರುವಾಗ ಈ ಎರಡು ಪಕ್ಷಗಳಲ್ಲಿ ನಿರ್ಭಯಕ್ಕೆ ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”

Explanation & meanings · 1
  1. ಅಲ್ಲಾಹನ ಸೃಷ್ಟಿಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಿ ನೀವು ಅವರನ್ನು ದೇವರೆಂದು ಕರೆದು ಆರಾಧಿಸುತ್ತೀರಿ. ಅವರು ದೇವರು ಎನ್ನುವುದಕ್ಕೆ ಅಲ್ಲಾಹು ಯಾವುದೇ ಪುರಾವೆಯನ್ನೂ ಇಳಿಸಿಲ್ಲ. ಅಲ್ಲಾಹನ ಆಜ್ಞೆಗೆ ವಿರುದ್ಧವಾಗಿ ಅವರನ್ನು ದೇವರನ್ನಾಗಿ ಮಾಡಿ ಪ್ರಾರ್ಥಿಸಲು ನೀವು ಸ್ವಲ್ಪವೂ ಭಯಪಡುವುದಿಲ್ಲ. ನಾನು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನನ್ನು ಮಾತ್ರ ಭಯಪಡುತ್ತೇನೆ. ಹೀಗಿರುವಾಗ, ಹೆಚ್ಚು ನಿರ್ಭಯರಾಗಿರುವವರು ಯಾರು? ನಾನೋ ಅಥವಾ ನೀವೋ? ಸರಿಯಾಗಿ ಆಲೋಚನೆ ಮಾಡಿ ಹೇಳಿ.