Skip to content
الأنعَام /

ಆಯತ್ 78

6 : 78
الأنعَام ಆಯತ್‌ಗಳು 165
ಸೂರ · الأنعَام
ಕನ್ನಡ · Hamza
6 : 78

فَلَمَّا رَءَا ٱلشَّمۡسَ بَازِغَةٗ قَالَ هَٰذَا رَبِّي هَٰذَآ أَكۡبَرُۖ فَلَمَّآ أَفَلَتۡ قَالَ يَٰقَوۡمِ إِنِّي بَرِيٓءٞ مِّمَّا تُشۡرِكُونَ

ನಂತರ ಸೂರ್ಯ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ! ಇವನು ಬಹಳ ದೊಡ್ಡವನು!” ನಂತರ ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.

Explanation & meanings · 1
  1. ಇಬ್ರಾಹೀಮರ (ಅವರ ಮೇಲೆ ಶಾಂತಿಯಿರಲಿ) ಕಾಲದ ಜನರು ವಿಗ್ರಹಗಳನ್ನು ಮಾತ್ರವಲ್ಲದೆ ಆಕಾಶಕಾಯಗಳನ್ನು ಕೂಡ ಪೂಜಿಸುತ್ತಿದ್ದರು. ಸೂರ್ಯ, ಚಂದ್ರ, ನಕ್ಷತ್ರಗಳು ದೇವರುಗಳೆಂದು ಅವರು ನಂಬುತ್ತಿದ್ದರು. ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ಅವರ ಈ ನಂಬಿಕೆಯು ಎಷ್ಟು ಬಾಲಿಶವೆಂದು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.