Skip to content
الأنعَام /

ಆಯತ್ 70

6 : 70

ಆಯತ್ 70 of الأنعَام (6 : 70). This page carries the verse in the Uthmani script with a translation of its meaning, at a stable URL that can be cited on its own.

الأنعَام ಆಯತ್‌ಗಳು 165
ಸೂರ · الأنعَام
ಕನ್ನಡ · Hamza
6 : 70

وَذَرِ ٱلَّذِينَ ٱتَّخَذُواْ دِينَهُمۡ لَعِبٗا وَلَهۡوٗا وَغَرَّتۡهُمُ ٱلۡحَيَوٰةُ ٱلدُّنۡيَاۚ وَذَكِّرۡ بِهِۦٓ أَن تُبۡسَلَ نَفۡسُۢ بِمَا كَسَبَتۡ لَيۡسَ لَهَا مِن دُونِ ٱللَّهِ وَلِيّٞ وَلَا شَفِيعٞ وَإِن تَعۡدِلۡ كُلَّ عَدۡلٖ لَّا يُؤۡخَذۡ مِنۡهَآۗ أُوْلَٰٓئِكَ ٱلَّذِينَ أُبۡسِلُواْ بِمَا كَسَبُواْۖ لَهُمۡ شَرَابٞ مِّنۡ حَمِيمٖ وَعَذَابٌ أَلِيمُۢ بِمَا كَانُواْ يَكۡفُرُونَ

ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರನ್ನು ಹಾಗೂ ಇಹಲೋಕದ ಜೀವನಕ್ಕೆ ಮರುಳಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಜನರು ತಮ್ಮ ಕರ್ಮಗಳ ಕಾರಣದಿಂದ ನಾಶವಾಗದಿರುವುದಕ್ಕಾಗಿ ಇದರ (ಕುರ್‌ಆನಿನ) ಮೂಲಕ ಅವರಿಗೆ ಉಪದೇಶ ನೀಡಿ. ಅವರಿಗೆ ಅಲ್ಲಾಹನ ಹೊರತು ಯಾವುದೇ ರಕ್ಷಕ ಅಥವಾ ಶಿಫಾರಸುಗಾರನಿಲ್ಲ. ಅವರು ಎಲ್ಲಾ ರೀತಿಯ ಪರಿಹಾರಗಳನ್ನು ನೀಡಿದರೂ ಅದನ್ನು ಅವರಿಂದ ಸ್ವೀಕರಿಸಲಾಗುವುದಿಲ್ಲ. ಅವರೇ ತಮ್ಮ ಕರ್ಮಗಳ ಕಾರಣದಿಂದ ನಾಶವಾದವರು. ಅವರು ಸತ್ಯವನ್ನು ನಿಷೇಧಿಸುವ ಕಾರಣ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ.