34 : 19
فَقَالُواْ رَبَّنَا بَٰعِدۡ بَيۡنَ أَسۡفَارِنَا وَظَلَمُوٓاْ أَنفُسَهُمۡ فَجَعَلۡنَٰهُمۡ أَحَادِيثَ وَمَزَّقۡنَٰهُمۡ كُلَّ مُمَزَّقٍۚ إِنَّ فِي ذَٰلِكَ لَأٓيَٰتٖ لِّكُلِّ صَبَّارٖ شَكُورٖ
ಆದರೆ ಅವರು ಹೇಳಿದರು: “ಓ ನಮ್ಮ ಪರಿಪಾಲಕನೇ! ನಮ್ಮ ಪ್ರಯಾಣದ ದೂರವನ್ನು ಹೆಚ್ಚಿಸು.” ಅವರು ಸ್ವತಃ ಅವರೊಂದಿಗೇ ಅಕ್ರಮವೆಸಗಿದರು. ನಂತರ ನಾವು ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು ಮತ್ತು ಅವರನ್ನು ಸಂಪೂರ್ಣವಾಗಿ ಚಿಂದಿ ಮಾಡಿದೆವು. ತಾಳ್ಮೆ ಮತ್ತು ಕೃತಜ್ಞತಾಭಾವವುಳ್ಳ ಪ್ರತಿಯೊಬ್ಬರಿಗೂ ಅದರಲ್ಲಿ ದೃಷ್ಟಾಂತಗಳಿವೆ.
Explanation & meanings · 1
- ಯಮನ್ ನಿವಾಸಿಗಳಿಗೆ ಈ ಹೆದ್ದಾರಿ ಪ್ರಯಾಣವು ಸುರಕ್ಷಿತ ಮತ್ತು ಅನುಕೂಲಕರವಾಗಿದ್ದರೂ ಸಹ ಅವರು ಅದನ್ನು ಅಸಹ್ಯಪಟ್ಟರು. ಈ ಹೆದ್ದಾರಿ ಕೂಡ ಜಗತ್ತಿನ ಇತರ ಹೆದ್ದಾರಿಗಳಂತೆ ದುರ್ಗಮ ಮತ್ತು ಕಷ್ಟಕರವಾಗಿಬೇಕೆಂದು ಅವರು ಬಯಸಿದರು.