34 : 16
فَأَعۡرَضُواْ فَأَرۡسَلۡنَا عَلَيۡهِمۡ سَيۡلَ ٱلۡعَرِمِ وَبَدَّلۡنَٰهُم بِجَنَّتَيۡهِمۡ جَنَّتَيۡنِ ذَوَاتَيۡ أُكُلٍ خَمۡطٖ وَأَثۡلٖ وَشَيۡءٖ مِّن سِدۡرٖ قَلِيلٖ
ಆದರೆ ಅವರು ನಿರ್ಲಕ್ಷಿಸಿದರು. ಆಗ ನಾವು ಅವರ ಕಡೆಗೆ ಪ್ರಬಲ ಪ್ರವಾಹವನ್ನು ಕಳುಹಿಸಿದೆವು. (ಆ ಪ್ರವಾಹದ ಮೂಲಕ) ಅವರ ಆ ಎರಡು (ಹಸಿರು) ತೋಟಗಳಿಗೆ ಬದಲಿಯಾಗಿ ಕಹಿ ಹಣ್ಣುಗಳು, ಪಕ್ಕೆ ಮರಗಳು ಮತ್ತು ಕೆಲವು ಬೋರೆ ಮರಗಳನ್ನು ಹೊಂದಿದ ಎರಡು ತೋಟಗಳನ್ನು ನೀಡಿದೆವು.
Explanation & meanings · 1
- ಅವರು ಬೆಟ್ಟದಿಂದ ಹರಿದು ಬರುವ ನೀರನ್ನು ತಡೆಗಟ್ಟಿ ಕೃಷಿಗೆ ಉಪಯೋಗಿಸಲು ಅಣೆಕಟ್ಟು ನಿರ್ಮಿಸಿದ್ದರು. ಬೆಟ್ಟದಿಂದ ಉಕ್ಕಿ ಬಂದ ಪ್ರವಾಹದಿಂದ ಈ ಅಣೆಕಟ್ಟು ಒಡೆದು ಅವರ ಹೊಲ ಬೆಳೆಗಳೆಲ್ಲವೂ ನಾಶವಾದವು. ನಂತರ ಅಲ್ಲಿ ಕಹಿ ಹಣ್ಣುಗಳು, ಪಕ್ಕೆ ಮರಗಳು ಮತ್ತು ಬೋರೆ ಮರಗಳ ಹೊರತು ಬೇರೇನೂ ಬೆಳೆಯಲಿಲ್ಲ.