Skip to content
آل عِمران /

ಆಯತ್ 154

3 : 154

ಆಯತ್ 154 of آل عِمران (3 : 154). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 154

ثُمَّ أَنزَلَ عَلَيۡكُم مِّنۢ بَعۡدِ ٱلۡغَمِّ أَمَنَةٗ نُّعَاسٗا يَغۡشَىٰ طَآئِفَةٗ مِّنكُمۡۖ وَطَآئِفَةٞ قَدۡ أَهَمَّتۡهُمۡ أَنفُسُهُمۡ يَظُنُّونَ بِٱللَّهِ غَيۡرَ ٱلۡحَقِّ ظَنَّ ٱلۡجَٰهِلِيَّةِۖ يَقُولُونَ هَل لَّنَا مِنَ ٱلۡأَمۡرِ مِن شَيۡءٖۗ قُلۡ إِنَّ ٱلۡأَمۡرَ كُلَّهُۥ لِلَّهِۗ يُخۡفُونَ فِيٓ أَنفُسِهِم مَّا لَا يُبۡدُونَ لَكَۖ يَقُولُونَ لَوۡ كَانَ لَنَا مِنَ ٱلۡأَمۡرِ شَيۡءٞ مَّا قُتِلۡنَا هَٰهُنَاۗ قُل لَّوۡ كُنتُمۡ فِي بُيُوتِكُمۡ لَبَرَزَ ٱلَّذِينَ كُتِبَ عَلَيۡهِمُ ٱلۡقَتۡلُ إِلَىٰ مَضَاجِعِهِمۡۖ وَلِيَبۡتَلِيَ ٱللَّهُ مَا فِي صُدُورِكُمۡ وَلِيُمَحِّصَ مَا فِي قُلُوبِكُمۡۚ وَٱللَّهُ عَلِيمُۢ بِذَاتِ ٱلصُّدُورِ

ಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು. ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ.

Explanation & meanings · 1
  1. ಉಹುದ್ ಯುದ್ಧದ ನಂತರ ಅಲ್ಲಾಹು ಮುಸಲ್ಮಾನರ ಮೇಲೆ ದಯೆ ತೋರಿ ಅವರಿಗೆ ಸುಖವಾದ ನಿದ್ದೆಯನ್ನು ಕರುಣಿಸಿದನು. ಇನ್ನೊಂದು ಕಡೆ ಕಪಟವಿಶ್ವಾಸಿಗಳು ಅವರ ಬಗ್ಗೆಯೇ ಚಿಂತಿತರಾಗಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ನಿರ್ಣಯಗಳು ಸರಿಯಿಲ್ಲ; ಅವರು ಯಾವ ಧರ್ಮದ ಕಡೆಗೆ ಜನರನ್ನು ಕರೆಯುತ್ತಿದ್ದಾರೋ ಆ ಧರ್ಮಕ್ಕೆ ಭವಿಷ್ಯವಿಲ್ಲ. ಅವರಿಗೆ ಅಲ್ಲಾಹನ ಕಡೆಯ ಸಹಾಯವಿಲ್ಲ ಎಂದು ಅವರು ಹೇಳುತ್ತಿದ್ದರು.