Skip to content
آل عِمران /

ಆಯತ್ 122

3 : 122

ಆಯತ್ 122 of آل عِمران (3 : 122). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 122

إِذۡ هَمَّت طَّآئِفَتَانِ مِنكُمۡ أَن تَفۡشَلَا وَٱللَّهُ وَلِيُّهُمَاۗ وَعَلَى ٱللَّهِ فَلۡيَتَوَكَّلِ ٱلۡمُؤۡمِنُونَ

ನಿಮ್ಮಲ್ಲಿನ ಎರಡು ಗುಂಪುಗಳು ಹೇಡಿಗಳಾಗಲು ಮುಂದಾದ ಸಂದರ್ಭ. ಅಲ್ಲಾಹು ಆ ಎರಡು ಪಂಗಡಗಳ ರಕ್ಷಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.

Explanation & meanings · 1
  1. ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಾಳುಪಡೆ, ಅಶ್ವಸೇನೆ ಮತ್ತು ಬಿಲ್ಲುಗಾರರನ್ನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿದ್ದರು. ಯುದ್ಧ ತಂತ್ರದ ಪ್ರಮುಖ ಭಾಗವಾಗಿ ಒಂದು ಗುಡ್ಡೆಯ ಮೇಲೆ ಕಾವಲು ನಿಲ್ಲಿಸಲಾಗಿದ್ದ ಬಿಲ್ಲುಗಾರರು ತಮ್ಮ ಕಾರ್ಯನಿರ್ವಹಣೆಯಲ್ಲಿ ತಪ್ಪೆಸಗಿದ ಕಾರಣ ಉಹುದ್ ಯುದ್ಧದಲ್ಲಿ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಯುದ್ಧದಲ್ಲಿ ಹೋರಾಡುತ್ತಿದ್ದ ಎರಡು ಗೋತ್ರದ ಜನರು ದಿಗಿಲುಗೊಂಡು ಯುದ್ಧದಿಂದ ಪಲಾಯನ ಮಾಡಬೇಕೆಂದು ಒಂದು ಕ್ಷಣ ಯೋಚಿಸಿದರು. ಆದರೆ ಅಲ್ಲಾಹು ಅವರ ಮನಸ್ಸಿಗೆ ದೃಢತೆಯನ್ನು ನೀಡಿ ಅವರನ್ನು ನಿಲ್ಲಿಸಿದನು.