3 : 12
قُل لِّلَّذِينَ كَفَرُواْ سَتُغۡلَبُونَ وَتُحۡشَرُونَ إِلَىٰ جَهَنَّمَۖ وَبِئۡسَ ٱلۡمِهَادُ
ಸತ್ಯನಿಷೇಧಿಗಳೊಡನೆ ಹೇಳಿರಿ: “ಸದ್ಯದಲ್ಲೇ ನಿಮ್ಮನ್ನು ಸೋಲಿಸಲಾಗುವುದು ಮತ್ತು ನರಕದ ಕಡೆಗೆ ಒಟ್ಟುಗೂಡಿಸಲಾಗುವುದು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.”
Explanation & meanings · 1
- ಇಲ್ಲಿ ಸತ್ಯನಿಷೇಧಿಗಳು ಎಂದರೆ ಯಹೂದಿಗಳು. ಈ ಭವಿಷ್ಯ ನುಡಿಯು ಸ್ವಲ್ಪ ಸಮಯದಲ್ಲೇ ಸತ್ಯವಾಗಿದೆ. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಹಾಗೂ ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು. ನಂತರ ಖೈಬರ್ ಕೋಟೆಯನ್ನು ವಶಪಡಿಸಲಾಯಿತು.