Skip to content
النور /

ಆಯತ್ 33

24 : 33

ಆಯತ್ 33 of النور (24 : 33). This page carries the verse in the Uthmani script with a translation of its meaning, at a stable URL that can be cited on its own.

النور ಆಯತ್‌ಗಳು 64
ಸೂರ · النور
ಕನ್ನಡ · Hamza
24 : 33

وَلۡيَسۡتَعۡفِفِ ٱلَّذِينَ لَا يَجِدُونَ نِكَاحًا حَتَّىٰ يُغۡنِيَهُمُ ٱللَّهُ مِن فَضۡلِهِۦۗ وَٱلَّذِينَ يَبۡتَغُونَ ٱلۡكِتَٰبَ مِمَّا مَلَكَتۡ أَيۡمَٰنُكُمۡ فَكَاتِبُوهُمۡ إِنۡ عَلِمۡتُمۡ فِيهِمۡ خَيۡرٗاۖ وَءَاتُوهُم مِّن مَّالِ ٱللَّهِ ٱلَّذِيٓ ءَاتَىٰكُمۡۚ وَلَا تُكۡرِهُواْ فَتَيَٰتِكُمۡ عَلَى ٱلۡبِغَآءِ إِنۡ أَرَدۡنَ تَحَصُّنٗا لِّتَبۡتَغُواْ عَرَضَ ٱلۡحَيَوٰةِ ٱلدُّنۡيَاۚ وَمَن يُكۡرِههُّنَّ فَإِنَّ ٱللَّهَ مِنۢ بَعۡدِ إِكۡرَٰهِهِنَّ غَفُورٞ رَّحِيمٞ

ವಿವಾಹವಾಗುವ ಸಾಮರ್ಥ್ಯವಿಲ್ಲದವರು—ಅಲ್ಲಾಹು ಅವರಿಗೆ ತನ್ನ ಔದಾರ್ಯದಿಂದ ಶ್ರೀಮಂತಿಕೆಯನ್ನು ಒದಗಿಸುವ ತನಕ ತಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲಿ. ನಿಮ್ಮ ಅಧೀನದಲ್ಲಿರುವ ಗುಲಾಮರಲ್ಲಿ ಯಾರಾದರೂ ನಿಮಗೆ ಏನಾದರೂ ನೀಡಿ ಸ್ವತಂತ್ರರಾಗಲು ಬಯಸಿದರೆ, ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಅವರನ್ನು ಸ್ವತಂತ್ರಗೊಳಿಸಿರಿ. ಅಲ್ಲಾಹು ನಿಮಗೆ ನೀಡಿದ ಸಂಪತ್ತಿನಿಂದ ಅವರಿಗೂ ಸ್ವಲ್ಪ ನೀಡಿರಿ. ನಿಮ್ಮ ಗುಲಾಮ ಸ್ತ್ರೀಯರು ಪರಿಶುದ್ಧರಾಗಿ ಬದುಕಲು ಬಯಸಿದರೆ, ಐಹಿಕ ಲಾಭಗಳನ್ನು ದೃಷ್ಟಿಯಲ್ಲಿಟ್ಟು ಅವರನ್ನು ಬಲವಂತವಾಗಿ ವ್ಯಭಿಚಾರಕ್ಕೆ ತಳ್ಳಬೇಡಿ. ಯಾರಾದರೂ ಅವರನ್ನು ಬಲವಂತಪಡಿಸಿದರೆ, ಆ ಗುಲಾಮ ಸ್ತ್ರೀಯರು ಬಲವಂತದಿಂದ ತಪ್ಪೆಸಗಿದ ಬಳಿಕವೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

Explanation & meanings · 2
  1. ನಾನು ಇಂತಿಷ್ಟು ಮೊತ್ತ ಹಣವನ್ನು ಸಂಗ್ರಹಿಸಿಕೊಟ್ಟರೆ ನೀವು ನನ್ನನ್ನು ಸ್ವತಂತ್ರಗೊಳಿಸಬೇಕೆಂದು ಗುಲಾಮರು ತಮ್ಮ ಯಜಮಾನರೊಡನೆ ವಿಮೋಚನಾ ಒಪ್ಪಂದ ಮಾಡುತ್ತಿದ್ದರು. ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಎಂಬ ವಚನದ ಅರ್ಥವೇನೆಂದರೆ, ಆ ಗುಲಾಮರಲ್ಲಿ ಸತ್ಯವಂತಿಕೆ ಮತ್ತು ಪ್ರಾಮಾಣಿಕತೆಯಿದೆಯೆಂದು ನಿಮಗೆ ತಿಳಿದು ಬಂದರೆ, ಅಥವಾ ಅವರು ಯಾವುದಾದರೂ ವೃತ್ತಿಯಲ್ಲಿ ತರಬೇತಿ ಪಡೆದಿದ್ದು ಆ ವೃತ್ತಿ ಮಾಡಿ ನಿಮ್ಮ ಹಣವನ್ನು ಪಾವತಿಸುವರೆಂಬ ಭರವಸೆ ನಿಮಗಿದ್ದರೆ ಅವರನ್ನು ಸ್ವತಂತ್ರಗೊಳಿಸಿರಿ ಎಂದರ್ಥ.
  2. ಇಸ್ಲಾಮೀ ಪೂರ್ವ ಕಾಲದಲ್ಲಿ (ಅಜ್ಞಾನಕಾಲದಲ್ಲಿ) ಯಜಮಾನರು ತಮ್ಮ ಗುಲಾಮ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಆದಾಯ ಗಳಿಸುತ್ತಿದ್ದರು. ಮುಸಲ್ಮಾನರು ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಿಂದ ಇಂತಹ ಕೆಲಸಗಳನ್ನು ಮಾಡಿಸಬಾರದೆಂದು ಇಲ್ಲಿ ಆದೇಶ ನೀಡಲಾಗಿದೆ.