Skip to content
النور /

ಆಯತ್ 22

24 : 22

ಆಯತ್ 22 of النور (24 : 22). This page carries the verse in the Uthmani script with a translation of its meaning, at a stable URL that can be cited on its own.

النور ಆಯತ್‌ಗಳು 64
ಸೂರ · النور
ಕನ್ನಡ · Hamza
24 : 22

وَلَا يَأۡتَلِ أُوْلُواْ ٱلۡفَضۡلِ مِنكُمۡ وَٱلسَّعَةِ أَن يُؤۡتُوٓاْ أُوْلِي ٱلۡقُرۡبَىٰ وَٱلۡمَسَٰكِينَ وَٱلۡمُهَٰجِرِينَ فِي سَبِيلِ ٱللَّهِۖ وَلۡيَعۡفُواْ وَلۡيَصۡفَحُوٓاْۗ أَلَا تُحِبُّونَ أَن يَغۡفِرَ ٱللَّهُ لَكُمۡۚ وَٱللَّهُ غَفُورٞ رَّحِيمٌ

ನಿಮ್ಮಲ್ಲಿರುವ ಶ್ರೇಷ್ಠರು ಮತ್ತು ಸಂಪನ್ನರು ತಮ್ಮ ಸಂಬಂಧಿಕರಿಗೆ, ಬಡವರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರಿಗೆ ಏನೂ ಕೊಡುವುದಿಲ್ಲವೆಂದು ಪ್ರತಿಜ್ಞೆ ಮಾಡದಿರಲಿ. ಅವರು ಅವರನ್ನು ಮನ್ನಿಸಲಿ ಮತ್ತು (ಅವರ ತಪ್ಪುಗಳನ್ನು) ನಿರ್ಲಕ್ಷಿಸಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಆಸೆ ಪಡುವುದಿಲ್ಲವೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

Explanation & meanings · 1
  1. ಮಿಸ್ತಹ್ ಎಂಬ ಹೆಸರಿನ ಸಹಾಬಿ ಅಚಾನಕ್ಕಾಗಿ ಈ ಅಪಪ್ರಚಾರದಲ್ಲಿ ಭಾಗಿಯಾಗಿದ್ದರು. ಇವರಿಗೆ ಆಯಿಶರ ತಂದೆ ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಖರ್ಚಿಗೆ ನೀಡುತ್ತಿದ್ದರು. ಈ ವಿಷಯ ತಿಳಿದಾಗ ಇನ್ನು ಮುಂದೆ ಅವರಿಗೆ ಖರ್ಚಿಗೆ ಏನೂ ಕೊಡುವುದಿಲ್ಲವೆಂದು ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪ್ರತಿಜ್ಞೆ ಮಾಡಿದರು.