Skip to content
الكَهف /

ಆಯತ್ 60

18 : 60
الكَهف ಆಯತ್‌ಗಳು 110
ಸೂರ · الكَهف
ಕನ್ನಡ · Hamza
18 : 60

وَإِذۡ قَالَ مُوسَىٰ لِفَتَىٰهُ لَآ أَبۡرَحُ حَتَّىٰٓ أَبۡلُغَ مَجۡمَعَ ٱلۡبَحۡرَيۡنِ أَوۡ أَمۡضِيَ حُقُبٗا

ಮೂಸಾ ತನ್ನ ಸೇವಕನೊಡನೆ ಹೇಳಿದ ಸಂದರ್ಭ: “ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪುವ ತನಕ ನಾನು ನಡೆಯುತ್ತಲೇ ಇರುವೆನು. ಅದಕ್ಕಾಗಿ ದೀರ್ಘ ಸಮಯ ಪ್ರಯಾಣ ಮಾಡಬೇಕಾಗಿ ಬಂದರೂ ಸಹ.”

Explanation & meanings · 1
  1. ಒಮ್ಮೆ ಮೂಸಾರೊಡನೆ (ಅವರ ಮೇಲೆ ಶಾಂತಿಯಿರಲಿ) ಒಬ್ಬ ವ್ಯಕ್ತಿ ಪ್ರಶ್ನೆ ಕೇಳಿದಾಗ ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೇಳಿದರು: “ಈಗ ಜಗತ್ತಿನಲ್ಲಿ ನನಗಿಂತಲೂ ಹೆಚ್ಚು ಜ್ಞಾನವಿರುವವರು ಯಾರೂ ಇಲ್ಲ.” ಅವರ ಈ ಮಾತು ಅಲ್ಲಾಹನಿಗೆ ಇಷ್ಟವಾಗಲಿಲ್ಲ. ಅಲ್ಲಾಹು ದೇವವಾಣಿಯ ಮೂಲಕ ಮೂಸಾರೊಡನೆ (ಅವರ ಮೇಲೆ ಶಾಂತಿಯಿರಲಿ) ಹೇಳಿದನು: “ನಿಮಗಿಂತ ಹೆಚ್ಚು ಜ್ಞಾನವಿರುವ ವ್ಯಕ್ತಿಯಿದ್ದಾರೆ.” ಮೂಸಾ ಹೇಳಿದರು: “ಅವರನ್ನು ನನಗೆ ತೋರಿಸು. ನಾನು ಅವರನ್ನು ಭೇಟಿಯಾಗಬೇಕು.” ಅಲ್ಲಾಹು ಹೇಳಿದನು: “ಅವರು ಎರಡು ಕಡಲುಗಳ ಸಂಗಮ ಸ್ಥಳದಲ್ಲಿದ್ದಾರೆ.” ಅಲ್ಲಾಹು ತಿಳಿಸಿದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ಒಂದು ಮೀನನ್ನು ತೆಗೆದುಕೊಂಡು ಹೋದರು. ಅದು ಬುಟ್ಟಿಯಿಂದ ನೆಗೆದು ಅಪ್ರತ್ಯಕ್ಷವಾಗುವ ಸ್ಥಳದಲ್ಲಿ ಆ ವ್ಯಕ್ತಿ ಸಿಗುತ್ತಾರೆಂದು ಅಲ್ಲಾಹು ದೇವವಾಣಿಯ ಮೂಲಕ ತಿಳಿಸಿದ್ದನು.