17 : 33
وَلَا تَقۡتُلُواْ ٱلنَّفۡسَ ٱلَّتِي حَرَّمَ ٱللَّهُ إِلَّا بِٱلۡحَقِّۗ وَمَن قُتِلَ مَظۡلُومٗا فَقَدۡ جَعَلۡنَا لِوَلِيِّهِۦ سُلۡطَٰنٗا فَلَا يُسۡرِف فِّي ٱلۡقَتۡلِۖ إِنَّهُۥ كَانَ مَنصُورٗا
ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಯಾರಾದರೂ ಅನ್ಯಾಯವಾಗಿ ಕೊಲೆಯಾದರೆ ಅವನ ವಾರಸುದಾರರಿಗೆ ನಾವು (ಪ್ರತೀಕಾರ ಪಡೆಯುವ) ಅಧಿಕಾರವನ್ನು ನೀಡಿದ್ದೇವೆ. ಆದರೆ ಕೊಲೆ ಮಾಡುವಾಗ ಅವನು ಎಲ್ಲೆ ಮೀರಬಾರದು. ನಿಶ್ಚಯವಾಗಿಯೂ ಅವನಿಗೆ ಸಹಾಯ ಮಾಡಲಾಗುವುದು.
Explanation & meanings · 1
- ಕೊಲೆಯಾದವರ ಕಡೆಯವರು ಪ್ರತೀಕಾರ ಪಡೆಯುವಾಗ ಎಲ್ಲೆ ಮೀರಬಾರದು. ಅಂದರೆ ಒಬ್ಬನ ಬದಲಿಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕೊಲ್ಲುವುದು, ಕೊಂದ ನಂತರ ಅಂಗಾಂಗಗಳನ್ನು ಬೇರ್ಪಡಿಸುವುದು, ಕ್ರೂರವಾಗಿ ಮತ್ತು ಬರ್ಬರವಾಗಿ ಕೊಲ್ಲುವುದು ಇತ್ಯಾದಿ ಮಾಡಬಾರದು.