Skip to content
الرَّعد /

ಆಯತ್ 14

13 : 14

ಆಯತ್ 14 of الرَّعد (13 : 14). This page carries the verse in the Uthmani script with a translation of its meaning, at a stable URL that can be cited on its own.

الرَّعد ಆಯತ್‌ಗಳು 43
ಸೂರ · الرَّعد
ಕನ್ನಡ · Hamza
13 : 14

لَهُۥ دَعۡوَةُ ٱلۡحَقِّۚ وَٱلَّذِينَ يَدۡعُونَ مِن دُونِهِۦ لَا يَسۡتَجِيبُونَ لَهُم بِشَيۡءٍ إِلَّا كَبَٰسِطِ كَفَّيۡهِ إِلَى ٱلۡمَآءِ لِيَبۡلُغَ فَاهُ وَمَا هُوَ بِبَٰلِغِهِۦۚ وَمَا دُعَآءُ ٱلۡكَٰفِرِينَ إِلَّا فِي ضَلَٰلٖ

ಅವನನ್ನು ಕರೆದು ಪ್ರಾರ್ಥಿಸುವುದೇ ನಿಜವಾದ ಪ್ರಾರ್ಥನೆ. ಅವರು ಅವನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವರು ಅವರ ಪ್ರಾರ್ಥನೆಗೆ ಸ್ವಲ್ಪವೂ ಉತ್ತರ ನೀಡುವುದಿಲ್ಲ. ಅವರ (ಪ್ರಾರ್ಥಿಸುವವರ) ಸ್ಥಿತಿಯು ತನ್ನ ಎರಡು ಕೈಗಳನ್ನು ದೂರದಿಂದ ನೀರಿನ ಕಡೆಗೆ ಚಾಚಿ ಅದು ತನ್ನ ಬಾಯಿಗೆ ತಲುಪಬೇಕೆಂದು ಅದರೊಡನೆ ಕೇಳುವವನಂತೆ. ಅದು ಅವನ ಬಾಯಿಗೆ ತಲುಪುವುದಿಲ್ಲ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.

Explanation & meanings · 1
  1. ಅಲ್ಲಾಹನನ್ನು ಬಿಟ್ಟು ಇತರ ದೇವರುಗಳನ್ನು ಕರೆದು ಪ್ರಾರ್ಥಿಸುವವರ ಸ್ಥಿತಿಯು ನೀರಿನ ಕಡೆಗೆ ತನ್ನ ಎರಡು ಕೈಗಳನ್ನು ಚಾಚಿ ಅದು ತನ್ನ ಬಾಯಿಗೆ ಬರಬೇಕೆಂದು ಬೇಡಿಕೊಳ್ಳುವವನಂತೆ. ನೀರಿಗೆ ಈತನ ಬೇಡಿಕೆಯೇನೆಂದು ತಿಳಿದಿಲ್ಲ. ಅವನು ತನ್ನೊಡನೆ ಬಾಯಿಗೆ ತಲುಪಬೇಕೆಂದು ಬೇಡುತ್ತಿದ್ದಾನೆಂದೂ ಅದಕ್ಕೆ ತಿಳಿದಿಲ್ಲ. ಅವನ ಬಾಯಿಗೆ ತಲುಪುವ ಶಕ್ತಿಯೂ ಅದಕ್ಕಿಲ್ಲ. ಅದೇ ರೀತಿ ಇವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳಿಗೂ ಇವರು ತಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದಾರೆಂದು ತಿಳಿದಿಲ್ಲ. ಅವರ ಬೇಡಿಕೆಯೇನೆಂದೂ ತಿಳಿದಿಲ್ಲ. ಆ ಬೇಡಿಕೆಯನ್ನು ಈಡೇರಿಸಿಕೊಡುವ ಶಕ್ತಿಯೂ ಅವರಿಗಿಲ್ಲ.