12 : 58
وَجَآءَ إِخۡوَةُ يُوسُفَ فَدَخَلُواْ عَلَيۡهِ فَعَرَفَهُمۡ وَهُمۡ لَهُۥ مُنكِرُونَ
ಯೂಸುಫರ ಸಹೋದರರು (ಈಜಿಪ್ಟಿಗೆ) ಬಂದರು. ಅವರು ಯೂಸುಫರ ಬಳಿಗೆ ತೆರಳಿದಾಗ, ಯೂಸುಫ್ ಅವರನ್ನು ಗುರುತಿಸಿದರು. ಆದರೆ ಅವರಿಗೆ ಯೂಸುಫರನ್ನು ಗುರುತಿಸಲಾಗಲಿಲ್ಲ.
Explanation & meanings · 1
- ಏಳು ಸಮೃದ್ಧಪೂರ್ಣ ವರ್ಷಗಳು ಕಳೆದ ಬಳಿಕ ಏಳು ಬರಗಾಲದ ವರ್ಷಗಳು ಬಂದವು. ಈ ವರ್ಷಗಳಲ್ಲಿ ಬರಗಾಲವು ಎಷ್ಟು ತೀವ್ರವಾಗಿತ್ತೆಂದರೆ ಈಜಿಪ್ಚ್ ದೇಶವು ಸಂಪೂರ್ಣವಾಗಿ ಬರ ಪೀಡಿತವಾಯಿತು. ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ಮತ್ತು ಅವರ ಮಕ್ಕಳು ವಾಸವಾಗಿದ್ದ ಕನ್‌ಆನ್ ದೇಶವು ಕೂಡ ಬರಗಾಲಕ್ಕೆ ತುತ್ತಾಯಿತು. ಯೂಸುಫ್ (ಅವರ ಮೇಲೆ ಶಾಂತಿಯಿರಲಿ) ಮೊದಲೇ ಯೋಜನೆಗಳನ್ನು ರಚಿಸಿ ಬರಗಾಲವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿದರು. ಈಜಿಪ್ಟಿನಲ್ಲಿ ಧಾನ್ಯ ಸಿಗುತ್ತದೆಯೆಂಬ ಸುದ್ದಿ ತಿಳಿದಾಗ ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಮಕ್ಕಳನ್ನು ಧಾನ್ಯ ಖರೀದಿಸಲು ಈಜಿಪ್ಟಿಗೆ ಕಳುಹಿಸಿದರು.