Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 116 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (57)
"ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹನ ಸ್ಮರಣೆ."
ಸಹೀಹ್ ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ (ಕುಬ್ರಾದಲ್ಲಿ) ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
ಸಹೀಹ್ ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ತುಚ್ಛವಾಗಿ ಕಾಣುವ ಪಾಪಗಳ ಉದಾಹರಣೆಯು ಒಂದು ಕಣಿವೆಯ ಒಳಭಾಗದಲ್ಲಿ ಇಳಿದುಕೊಂಡ ಒಂದು ಗುಂಪು ಜನರಂತಿದೆ. ಅವರಲ್ಲೊಬ್ಬನು ಒಂದು ಕಡ್ಡಿಯನ್ನು ತಂದನು, ಇನ್ನೊಬ್ಬನು ಒಂದು ಕಡ್ಡಿಯನ್ನು ತಂದನು. ಹೀಗೆ (ಕಡ್ಡಿಗಳನ್ನು ಸಂಗ್ರಹಿಸಿ) ಅವರು ತಮ್ಮ ರೊಟ್ಟಿಯನ್ನು ಬೇಯಿಸಿದರು. ಖಂಡಿತವಾಗಿಯೂ, ತುಚ್ಛವಾಗಿ ಕಾಣುವ ಪಾಪಗಳು, ಯಾವಾಗ ಅವುಗಳಿಗಾಗಿ ಮನುಷ್ಯನು ಹಿಡಿಯಲ್ಪಡುತ್ತಾನೋ (ವಿಚಾರಣೆಗೆ ಒಳಪಡುತ್ತಾನೋ), ಅವು ಅವನನ್ನು ನಾಶಮಾಡುತ್ತವೆ".
ಸಹೀಹ್ ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.
"ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ."
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು.
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ."
ಇತರ ಸಾಕ್ಷಿ ಹದೀಸ್‌ಗಳ ಆಧಾರದಿಂದ ಸಹೀಹ್. ಇದನ್ನು ಅಬೂದಾವೂದ್ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ".
ಹಸನ್ ಲಿಗೈರಿಹಿ (ಇತರ ವರದಿಗಳಿಂದಾಗಿ ಹಸನ್). ಇದನ್ನು ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.