Skip to content
839 ಹದೀಸ್‌ಗಳು

ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ

ಫಲಿತಾಂಶಗಳನ್ನು ಫಿಲ್ಟರ್ ಮಾಡಿ

839 ರಲ್ಲಿ 116 ಕಾರ್ಡ್‌ಗಳು

ಫಿಲ್ಟರ್‌ಗಳನ್ನು ತೆಗೆದುಹಾಕಿ

ವರದಿಗಾರ

ಎಲ್ಲಾ ವರದಿಗಾರರನ್ನು ತೋರಿಸಿ (57)
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರ ಪೈಕಿ ಒಬ್ಬರಿಂದ - (ಈ ಬಗ್ಗೆ ಅಬೂ ಆಮಿರ್ ಹೇಳುತ್ತಾರೆ: ನಾಫಿಅ್ ಹೇಳಿದರು: 'ಅದು ಹಫ್ಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಎಂದು ನಾನು ಭಾವಿಸುತ್ತೇನೆ') - ವರದಿಯಾಗಿದೆ: "ಅವರಲ್ಲಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣದ ಬಗ್ಗೆ ಕೇಳಲಾಯಿತು. ಆಗ ಅವರು ಹೇಳಿದರು: 'ನಿಮಗೆ ಅದು (ಅದೇ ರೀತಿಯಲ್ಲಿ ಪಠಿಸಲು) ಸಾಧ್ಯವಾಗುವುದಿಲ್ಲ'. ಆಗ ಅವರಲ್ಲಿ ಹೇಳಲಾಯಿತು: 'ನಮಗೆ ಅದರ ಬಗ್ಗೆ ತಿಳಿಸಿ (ಓದಿ ತೋರಿಸಿ)'. ಆಗ ಅವರು ನಿಧಾನವಾಗಿ ಮತ್ತು ಸ್ಪಷ್ಟವಾಗಿ ಪಠಿಸಿದರು.ಅಬೂ ಆಮಿರ್ ಹೇಳುತ್ತಾರೆ: ನಾಫಿಅ್ ಹೇಳಿದರು: ನಂತರ ಇಬ್ನ್ ಅಬೀ ಮುಲೈಕಾ ನಮಗಾಗಿ ಅದನ್ನು (ಹಫ್ಸಾ ಓದಿದಂತೆ) ಓದಿ ತೋರಿಸಿದರು: “ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್” [ಅಲ್-ಫಾತಿಹಾ: 2], ನಂತರ ನಿಲ್ಲಿಸಿದರು. “ಅರ್ರಹ್ಮಾನಿ ರ್ರಹೀಮ್” [ಅಲ್-ಫಾತಿಹಾ: 3], ನಂತರ ನಿಲ್ಲಿಸಿದರು. “ಮಾಲಿಕಿ ಯೌಮಿದ್ದೀನ್”."
ಸಹೀಹ್ ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಉದಾಸೀನತೆಯಿಂದ ಮೂರು ಜುಮುಅ (ಶುಕ್ರವಾರದ ನಮಾಝ್) ಗಳನ್ನು ಬಿಡುತ್ತಾರೋ, ಅಲ್ಲಾಹು ಅವರ ಹೃದಯದ ಮೇಲೆ ಮೊಹರು ಹಾಕುತ್ತಾನೆ".
ಸಹೀಹ್ ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕೈ ಹಿಡಿದು ಹೇಳಿದರು: "ಓ ಮುಆದ್, ಅಲ್ಲಾಹನಾಣೆ! ಖಂಡಿತವಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ." ನಂತರ ಅವರು ಹೇಳಿದರು: "ಓ ಮುಆದ್, ನಾನು ನಿನಗೆ ಉಪದೇಶ ಮಾಡುತ್ತಿದ್ದೇನೆ. ಎಲ್ಲಾ ನಮಾಝ್‌ಗಳ ನಂತರ ಹೀಗೆ ಹೇಳುವುದನ್ನು ಬಿಟ್ಟುಬಿಡಬೇಡ: ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನಗೆ ಕೃತಜ್ಞತೆ ಸಲ್ಲಿಸಲು ಮತ್ತು ಉತ್ತಮವಾದ ರೀತಿಯಲ್ಲಿ ನಿನ್ನ ಆರಾಧನೆ ಮಾಡಲು ನನಗೆ ಸಹಾಯ ಮಾಡು."
ಸಹೀಹ್ ಇದನ್ನು ಅಬೂದಾವೂದ್, ನಸಾಈ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು".
ಸಹೀಹ್ ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು 'ಜುನುಬ್' (ಅಶುದ್ಧ) ಆಗಿರದಿದ್ದ ಹೊರತು, ಉಳಿದೆಲ್ಲಾ ಸ್ಥಿತಿಗಳಲ್ಲೂ ನಮಗೆ ಕುರ್‌ಆನ್ ಓದಿ ಕೊಡುತ್ತಿದ್ದರು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."
ಹಸನ್. ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು (ಇಸ್ಲಾಮಿಗೆ) ಆಹ್ವಾನಿಸದೆ ಅವರೊಂದಿಗೆ ಎಂದಿಗೂ ಯುದ್ಧ ಮಾಡುತ್ತಿರಲಿಲ್ಲ."
ಸಹೀಹ್ ಇದನ್ನು ಅಹ್ಮದ್ ಮತ್ತು ಬೈಹಕಿ ವರದಿ ಮಾಡಿದ್ದಾರೆ.