ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು
ಅಬೂ ಹಯ್ಯಾಜ್ ಅಸದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
قَالَ لِي عَلِيُّ بْنُ أَبِي طَالِبٍ: أَلَا أَبْعَثُكَ عَلَى مَا بَعَثَنِي عَلَيْهِ رَسُولُ اللهِ صَلَّى اللهُ عَلَيْهِ وَسَلَّمَ؟ أَنْ لَا تَدَعَ تِمْثَالًا إِلَّا طَمَسْتَهُ، وَلَا قَبْرًا مُشْرِفًا إِلَّا سَوَّيْتَهُ.
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರಿಗೆ (ಸಹಾಬಿಗಳಿಗೆ) ಆದೇಶಿಸುವುದೇನೆಂದರೆ, ಯಾವುದೇ ಪ್ರತಿಮೆಯನ್ನು — ಅಂದರೆ ಆತ್ಮವಿರುವ ಜೀವಿಯ ಮೂರ್ತ ಅಥವಾ ಅಮೂರ್ತ ರೂಪ — ತೊಲಗಿಸದೆ ಅಥವಾ ಅಳಿಸಿಹಾಕದೆ ಬಿಡಬಾರದು. ಅದೇ ರೀತಿ, ಎತ್ತರಿಸಿ ಕಟ್ಟಲಾಗಿರುವ ಸಮಾಧಿಯನ್ನು ನೆಲಸಮಗೊಳಿಸದೆ ಮತ್ತು ಅದರ ಮೇಲೆ ಕಟ್ಟಲಾಗಿರುವುದನ್ನು ದ್ವಂಸಗೊಳಿಸದೆ ಬಿಡಬಾರದು; ಅಥವಾ ಸಮಾಧಿಯು ಭೂಮಿಯಿಂದ ಒಂದು ಗೇಣು ಮಾತ್ರ ಎತ್ತರವಾಗಿರುವಂತೆ ಮಾಡಬೇಕು.
...:
ಜೀವವಿರುವ ವಸ್ತುವಿನ ಚಿತ್ರವನ್ನು ರಚಿಸುವುದು ನಿಷಿದ್ಧವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
ಅಧಿಕಾರವಿರುವವನು ಅಥವಾ ಸಾಮರ್ಥ್ಯವಿರುವವನು ಕೆಡುಕನ್ನು ಕೈಯಿಂದ ನಿವಾರಿಸುವುದು ಧರ್ಮನಿಯಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
ಅಜ್ಞಾನಕಾಲದ ಅವಶೇಷಗಳಾದ ಚಿತ್ರಗಳು, ಪ್ರತಿಮೆಗಳು ಮತ್ತು ಸಮಾಧಿಗಳ ಮೇಲಿರುವ ಕಟ್ಟಡಗಳನ್ನು ತೊಲಗಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ಸಾಹ ತೋರುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.
ಸಹೀಹ್ ಮುಸ್ಲಿಮ್. (2/ 666) (969).
ಇನ್ನಷ್ಟು (8)
القول المفيد على كتاب التوحيد.
لابن عثيمين (2/ 446).
الملخص في شرح كتاب التوحيد.
لصالح الفوزان (ص402).
الجديد في شرح كتاب التوحيد.
لمحمد القرعاوي (ص447).
كتاب التوحيد.
للإمام محمد بن عبد الوهاب (ص138).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
3 ಗ್ರಂಥಗಳುಇನ್ನಷ್ಟು (3)
- شرح الصدور بتحريم رفع القبور«أَنْ لَا أَدَعَ تِمْثَالًا إِلَّا طَمَسْتُهُ، وَلَا قَبْرًا مُشْرِفًا إِلَّا سَوَّيْتُهُ»[14].
- عقيدة التوحيدعقيدة التوحيد وبيان ما يضادها...«أَلَا أَبْعَثُكَ عَلَى مَا بَعَثَنِي عَلَيْهِ رَسُولُ اللَّهِ ﷺ؟ أَنْ لَا تَدَعَ تِمْثَالًا إِلَّا طَمَسْتَهُ، وَلَا قَبْرًا مُشْرِفًا إِلَّا سَوَّيْتَهُ»[68].
- مجموعة زاد العقيده (4)العقيدة 4أَلا أَبْعَثُكَ على ما بَعَثَنِي عَلَيْهِ رسولُ الله صلى الله عليه وسلم؟ «أَنْ لا تَدَعَ تِمْثالًا إِلَّا طَمَسْتَهُ، وَلا قَبْرًا مُشْرِفًا إِلَّا سَوَّيْتَهُ».