Skip to content

"ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು."

ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

"ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು." ಮುಸ್ಲಿಮ್ ಅವರ ವರದಿಯಲ್ಲಿ (ಹೀಗಿದೆ): "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒರಗಿಕೊಳ್ಳುತ್ತಿದ್ದ ದಿಂಬು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು."

كَانَ فِرَاشُ رَسُولِ اللَّهِ صَلَّى اللهُ عَلَيْهِ وَسَلَّمَ مِنْ أَدَمٍ، وَحَشْوُهُ مِنْ لِيفٍ، وَلِمُسلمٍ: كَانَ وِسَادَةُ رَسُولِ اللهِ صَلَّى اللهُ عَلَيْهِ وَسَلَّمَ الَّتِي يَتَّكِئُ عَلَيْهَا مِنْ أَدَمٍ حَشْوُهَا لِيفٌ.

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸಿರುವುದೇನೆಂದರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲಗುತ್ತಿದ್ದ ಹಾಸಿಗೆಯು ಹದಮಾಡಿದ ಚರ್ಮದಿಂದ ತಯಾರಿಸಲ್ಪಟ್ಟಿತ್ತು ಮತ್ತು ಅದು ಖರ್ಜೂರದ ಮರದ ನಾರಿನಿಂದ ತುಂಬಲ್ಪಟ್ಟಿತ್ತು. ಅದೇ ರೀತಿ ಅವರು ಒರಗಿಕೊಳ್ಳುತ್ತಿದ್ದ ದಿಂಬು ಕೂಡ (ಹಾಗೆಯೇ ಇತ್ತು).

ಹದೀಸಿನ ಪ್ರಯೋಜನಗಳು

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಐಹಿಕ ನಿರಾಸಕ್ತಿ ಮತ್ತು ಪ್ರಾಪಂಚಿಕ ಸುಖಭೋಗಗಳಿಂದ ಅವರು ವಿಮುಖರಾಗಿರುತ್ತಿದ್ದ ರೀತಿಯನ್ನು ಇದು ವಿವರಿಸುತ್ತದೆ. ಅಲ್ಲಾಹು ಬಯಸಿದ್ದರೆ ಅವರಿಗೆ ಅದನ್ನು (ಭೂಲೋಕ ಸುಖವನ್ನು) ಅನುಭವಿಸುವ ಸಾಮರ್ಥ್ಯವನ್ನು ನೀಡುತ್ತಿದ್ದನು (ಆದರೂ ಅವರು ಸರಳತೆಯನ್ನು ಆರಿಸಿಕೊಂಡರು).

ಹಾಸಿಗೆ ಮತ್ತು ದಿಂಬುಗಳನ್ನು ಇಟ್ಟುಕೊಳ್ಳುವುದು, ಅವುಗಳ ಮೇಲೆ ಮಲಗುವುದು ಮತ್ತು ಅವುಗಳನ್ನು ಆಧಾರವಾಗಿ ಬಳಸುವುದು ಸಮ್ಮತಾರ್ಹವಾಗಿದೆ.

ಮುಸ್ಲಿಮನು ತನ್ನ ಸ್ಥಿತಿ ಮತ್ತು ಜೀವನವನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಿತಿಯೊಂದಿಗೆ ಹೋಲಿಸಿ ನೋಡಿಕೊಳ್ಳಬೇಕು. ಏಕೆಂದರೆ ಅವರೇ ಅತ್ಯುತ್ತಮ ಮಾದರಿಯಾಗಿದ್ದಾರೆ. ಅವರ ಹೆಜ್ಜೆಗುರುತುಗಳನ್ನು ಅನುಸರಿಸುವವನು ಇಹಲೋಕ ಮತ್ತು ಪರಲೋಕದಲ್ಲಿ ಸರಿದಾರಿ ಮತ್ತು ಯಶಸ್ಸನ್ನು ಪಡೆಯುತ್ತಾನೆ.

ಪರಲೋಕಕ್ಕಾಗಿ ಸಿದ್ಧತೆ ನಡೆಸುವ ಬಗ್ಗೆ ಆಸಕ್ತಿ ವಹಿಸಬೇಕು. ವಿಶ್ವಾಸಿಯು ಅಲ್ಲಾಹನ ಆರಾಧನೆಗೆ ಸಹಾಯವಾಗುವಷ್ಟು ಮಾತ್ರ ಪ್ರಾಪಂಚಿಕ ಸಂಪತ್ತನ್ನು ಪಡೆಯಬೇಕು (ಅದರಲ್ಲೇ ತೃಪ್ತಿಪಡಬೇಕು). ಸಂಪತ್ತನ್ನು ಹೆಚ್ಚು ಹೆಚ್ಚು ಶೇಖರಿಸುವಲ್ಲಿ ಮಗ್ನನಾಗಬಾರದು. ಅಲ್ಲಾಹು ಅಂತಹವರನ್ನು ಟೀಕಿಸುತ್ತಾ ಹೀಗೆ ಹೇಳಿದ್ದಾನೆ: “ಹೆಚ್ಚು ಹೆಚ್ಚು ಪಡೆಯಬೇಕೆಂಬ ವ್ಯಾಮೋಹವು ನಿಮ್ಮನ್ನು ಮೈಮರೆಯುವಂತೆ ಮಾಡಿತು. ನೀವು ಗೋರಿಗಳನ್ನು ಸೇರುವ ತನಕ (ಇದೇ ಸ್ಥಿತಿಯಲ್ಲಿರುವಿರೇನು)” [ಅತ್ತಕಾತುರ್: 1-2].

ಉಲ್ಲೇಖಗಳು

ಸಹೀಹುಲ್ ಬುಖಾರಿ. (8/ 97) (6456).

ಸಹೀಹ್ ಮುಸ್ಲಿಮ್. (3/ 1650) (2082).

ಇನ್ನಷ್ಟು (4)

البحر المحيط الثجاج في شرح صحيح الإمام مسلم بن الحجاج (34/ 662).

إرشاد الساري لشرح صحيح البخاري (9/ 264).

المفهم لما أشكل من تلخيص كتاب مسلم (5/ 403).

النهاية في غريب الحديث والأثر (971).